ಬ್ರಿಟನ್ ಐತಿಹಾಸಿಕ ನಿರ್ಧಾರ : ಐರೋಪ್ಯ ಒಕ್ಕೂಟದ ಸದಸ್ಯತ್ವದಿಂದ ನಿರ್ಗಮನ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್,ಫೆ.1- ಐರೋಪ್ಯ ಒಕ್ಕೂಟದ (ಇಯು) ಸುಮಾರು ಅರ್ಧ ದಶಕಗಳ ಸದಸ್ಯತ್ವದಿಂದ ಬ್ರಿಟನ್ ಅಧಿಕೃತವಾಗಿ ಹೊರ ಬಂದಿದೆ. ತೀವ್ರ ವಾದ-ವಿವಾದಗಳು ಮತ್ತು ಅನಿಶ್ಚಿತತೆ ನಡುವೆಯೂ ಇಂಗ್ಲೆಂಡ್ ಕೊನೆಗೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇದರಿಂದ 28 ದೇಶಗಳ ಪ್ರಬಲ ಒಕ್ಕೂಟದಿಂದ ಬ್ರಿಟನ್ ದೂರವಾಗಲಿದ್ದು, ಒಕ್ಕೂಟಕ್ಕೆ ದೊಡ್ಡ ಹಿನ್ನಡೆ ಆಗಲಿದೆ.

ಬ್ರಿಟನ್‍ನ ಈ ನಿರ್ಧಾರಕ್ಕೆ ದೇಶದ ನಾಗರಿಕರಲ್ಲಿ ಸಂಭ್ರಮ ಮತ್ತು ಕಣ್ಣೀರು ಕಂಡುಬಂತು. ಎರಡನೇ ವಿಶ್ವಯುದ್ಧ ನಂತರ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಒಗ್ಗಟ್ಟು ಪ್ರದರ್ಶಿಸಲು ರಚನೆಯಾಗಿದ್ದ ಐರೋಪ್ಯ ಒಕ್ಕೂಟದಿಂದ ಹೊರ ಬರಲು ಬ್ರಿಟನ್ ಪ್ರಯತ್ನಿಸುತ್ತಲೇ ಬಂದಿತ್ತು.

ಈ ಮೂಲಕ ಬ್ರಿಟನ್ ಐರೋಪ್ಯ ಒಕ್ಕೂಟದ 47 ವರ್ಷಗಳ ಸದಸ್ಯತ್ವವನ್ನು ಕೊನೆಗೊಳಿಸಿದೆ. ಬ್ರಿಟನ್‍ನ ಒಟ್ಟು ಪ್ರಜೆಗಳ ಅರ್ಧಕ್ಕೂ ಹೆಚ್ಚು ಸದಸ್ಯರು ಮೂರೂವರೆ ವರ್ಷಗಳ ಹಿಂದೆ ಬ್ರೆಕ್ಸಿಟ್ (ಬ್ರಿಟನ್ ಎಕ್ಸಿಟ್) ಪರವಾಗಿ ಮತ ಚಲಾಯಿಸಿದ್ದರು.ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರ ಬರುವ ಪ್ರಕ್ರಿಯೆಯಾದ ಬ್ರೆಕ್ಸಿಟ್‍ಗೆ ಐರೋಪ್ಯ ಸಂಸತ್ ಅಂತಿಮ ಒಪ್ಪಿಗೆ ನೀಡುವ ಮೂಲಕ ಐದು ದಶಕದ ಐರೊಪ್ಯ ಒಕ್ಕೂಟದ ಒಡನಾಟವನ್ನು ಬ್ರಿಟನ್ ಇಂದಿನಿಂದ ಅಧಿಕೃತವಾಗಿ ಹೊರ ಬಂದಿದೆ.

ಬ್ರೆಕ್ಸಿಟ್ ನಿಲುವಳಿ ಮೇಲೆ ಬುಧವಾರ ನಡೆದ ಚರ್ಚೆಯಲ್ಲಿ ಐರೋಪ್ಯ ಸಂಸತ್‍ನ ಅನೇಕ ಸದಸ್ಯರು ಭಾವನಾತ್ಮಕ ಭಾಷಣ ಮಾಡಿದ್ದರು. ಕೊನೆಯಲ್ಲಿ ನಡೆದ ಮತದಾನದಲ್ಲಿ ಬ್ರಿಕ್ಸಿಟ್ ಪರ 621 ಮತ್ತು ವಿರುದ್ಧ 49 ಮತ ಚಲಾವಣೆಯಾದವು. 13 ಸದಸ್ಯರು ತಟಸ್ಥರಾದರು.

ಸ್ಕಾಟ್ಲೆಂಡ್‍ನ ಸಾಂಪ್ರದಾಯಿಕ ವಿದಾಯ ಗೀತೆ ಆಲ್ಡï ಲ್ಯಾಂಗ್ ಸೈನ್ ಅನ್ನು ನುಡಿಸುವ ಮೂಲಕ ಬ್ರಿಟನ್‍ಗೆ ಬೀಳ್ಕೊಡುಗೆ ನೀಡಲಾಯಿತು. ಐರೋಪ್ಯ ಸಂಸತ್‍ನಲ್ಲಿ ಅಯು ರಿವೊಯಿಲ್ ಪಕ್ಷದ ನೇತೃತ್ವದಲ್ಲಿ ಬ್ರಿಟನ್‍ನ 73 ಸಂಸದರು ಇದ್ದು, ಹಲವರು ಬೇಸರದಿಂದ ಕಣ್ಣೀರು ಹಾಕಿದರು.

Facebook Comments

Sri Raghav

Admin