ಸೇತುವೆ ಕುಸಿದು 7 ಮಂದಿ ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಕುಳು(ಇಂಡೋನೇಷ್ಯಾ), ಜ.20-ಭಾರೀ ಮಳೆಯಿಂದ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯೊಂದು ಕುಸಿದು 7 ವಿದ್ಯಾರ್ಥಿಗಳು ಜಲಸಮಾಧಿಯಾಗಿ ಅನೇಕರು ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ಸುಮಾತ್ರೋ ದ್ವೀಪದ ಕೌರು ಪಟ್ಟಣದಲ್ಲಿ ನಿನ್ನೆ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಇನ್ನೂ ಕೆಲವರು ನದಿ ನೀರಿನ ಪ್ರವಾಹದಲ್ಲಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇತುವೆ ಮೇಲೆ ತೆರಳುತ್ತಿದ್ದಾಗ, ಹಠಾತ್ ಕುಸಿಯಿತು. ಈ ಸಂದರ್ಭದಲ್ಲಿ 7 ವಿದ್ಯಾರ್ಥಿಗಳು ಜಲಸಮಾಧಿಯಾದರು. ಕೆಲವರನ್ನು ರಕ್ಷಿಸಲಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.

ಭಾರೀ ಮಳೆಯಿಂದ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಕೆಳಗೆ ನದಿ ನೀರು ಸಾಮಾನ್ಯಕ್ಕಿಂತ ಹೆಚ್ಚು ರಭಸದಿಂದ ಹರಿಯುತ್ತಿತ್ತು. ಪ್ರವಾಹದಿಂದಾಗಿ ಇನ್ನೂ ಕೆಲವು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಮುಂದುವರೆದಿದೆ.

Facebook Comments