ಬೃಂದಾವನ್ ಪ್ರಾಪರ್ಟಿಸ್ ವಿರುದ್ಧ 2300 ದೂರು, 65 ಕೋಟಿ ವಂಚನೆ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4- ಬೃಂದಾವನ ಪ್ರಾಪರ್ಟಿಸ್ ಕಂಪೆನಿ ಮಾಲೀಕ ದಿನೇಶ್‍ಗೌಡ ವಿರುದ್ಧ ದಿನದಿಂದ ದಿನಕ್ಕೆ ದೂರುಗಳು ಬರುತ್ತಿದ್ದು, ಇದುವರೆಗೂ 2300 ಮಂದಿ ದೂರು ನೀಡಿದ್ದಾರೆ. ಕಡಿಮೆ ಬೆಲೆಗೆ ನಿವೇಶನ ನೀಡುವುದಾಗಿ ದಿನೇಶ್‍ಗೌಡ ಇದುವರೆಗೂ ಬರೋಬರಿ 65 ಕೋಟಿ ರೂ. ವಂಚಿಸಿರುವುದು ಗೊತ್ತಾಗಿದೆ ಎಂದು ರಾಜಾಜಿನಗರ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ದಿನೇಶ್‍ಗೌಡ ಅವರನ್ನು ಹಾಸನದ ಅರಕಲಗೂಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದು ರಾಜಾಜಿನಗರ ಪೊಲೀಸರು ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ರಾಜಾಜಿನಗರದಲ್ಲಿ ದಿನೇಶ್‍ಗೌಡ ಕಚೇರಿ ತೆರೆದಿದ್ದು, ಕಡಿಮೆ ಬೆಲೆಗೆ ನಿವೇಶನ ನೀಡುವುದಾಗಿ ದೃಶ್ಯ ಮಾಧ್ಯಮದಲ್ಲಿ ಜಾಹಿರಾತು ನೀಡಿ ಜನರನ್ನು ಆಕರ್ಷಿಸಿದ್ದರು.

ಶ್ರಮಿಕ ವರ್ಗದ ಜನರು ಈ ಜಾಹಿರಾತು ನೋಡಿ ನಿವೇಶನ ಪಡೆದುಕೊಳ್ಳಬೇಕೆಂದು 2 ಲಕ್ಷ , 5 ಲಕ್ಷ, 10 ಲಕ್ಷ ಹೀಗೆ ಹಣ ಕೊಟ್ಟಿದ್ದರು. ನಿಗದಿತ ಸಮಯಕ್ಕೆ ನಿವೇಶನ ಕೊಡದೆ ಸತಾಯಿಸುತ್ತಿದ್ದುದರಿಂದ ಹಣ ಕೊಟ್ಟವರು , ಹಣ ಹಿಂದಿರುಗಿಸುವಂತೆ ಕೇಳಿದಾಗ ಕಚೇರಿ ಬೀಗ ಹಾಕಿಕೊಂಡು ದಿನೇಶ್‍ಗೌಡ ಪರಾರಿಯಾಗಿದ್ದರು.

ಇದೀಗ ಪೆÇಲೀಸರ ವಶದಲ್ಲಿರುವ ದಿನೇಶ್‍ಗೌಡನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಎಷ್ಟು ಜನರಿಂದ ಎಷ್ಟೆಷ್ಟು ಹಣ ಸಂಗ್ರಹಿಸಿದ್ದಾರೆ ಎಂಬ ಬಗ್ಗೆ ರಾಜಾಜಿನಗರ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments