ಬ್ರಿಸ್ಬೇನ್ ಟೆಸ್ಟ್ : ಭಾರತಕ್ಕೆ ಗಾಯಾಳುಗಳ ಸಮಸ್ಯೆ, ರಹಾನೆಗೆ ಅಗ್ನಿಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಜ.12- ಆತಿಥೇಯ ಪ್ರವಾಸಿ ಆಸ್ಟ್ರೇಲಿಯಾದ ವಿರುದ್ಧ ನಡೆದ 3ನೇ ಟೆಸ್ಟ್ ಅನ್ನು ಡ್ರಾ ಸಾಧಿಸಿರುವ ರಹಾನೆ ಸಾರಥ್ಯದ ಭಾರತ ತಂಡದ ಮೇಲೆ ಈಗ ಗಾಯಾಳುಗಳ ಕರಿನೆರಳು ಬಿದ್ದಿದೆ. ಅಡಿಲೇಡ್ ಟೆಸ್ಟ್ ನಂತರ ಪುಟಿದೆದ್ದಿರುವ ಭಾರತ ತಂಡದ ಗೆಲುವಿಗೆ ಪಾತ್ರರಾಗಿರುವ ಆಟಗಾರರೇ ಗಾಯಾಳು ಗಳ ಪಟ್ಟಿ ಸೇರುತ್ತಿರುವುದು ರಹಾನೆಗೆ ತಲೆನೋವಾಗಿದ್ದರೂ ಗಬ್ಬಾ ಟೆಸ್ಟ್‍ಗೂ ಮುನ್ನ ಅಗ್ನಿಪರೀಕ್ಷೆಯನ್ನು ಗೆಲ್ಲುವ ಒತ್ತಡವಿದೆ.

ಜಡ್ಡು ಫುಲ್‍ರೆಸ್ಟ್:
ಅಡಿಲೇಡ್ ಟೆಸ್ಟ್‍ಗೆ ಗೈರಾಜಾಗಿದ್ದ ಅಲೌಂಡರ್ ರವೀಂದ್ರಾಜಾಡೇಜಾ ನಂತರ ಮೆಲ್ಬರ್ನ್ ಟೆಸ್ಟ್‍ನಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಿಂದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು, ಸಿಡ್ನಿ ಟೆಸ್ಟ್‍ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಆಸೀಸ್‍ನ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಜಾಡೇಜಾ (4 ವಿಕೆಟ್) ಹಾಗೂ ಸ್ಮಿತ್‍ರನ್ನು ರನೌಟ್ ಮಾಡುವ ಮೂಲಕ ಪೇನ್ ಪಡೆ ರನ್ ದಾಹಕ್ಕೆ ಬ್ರೇಕ್ ಆಗಿದ್ದರು, ಆದರೆ ಬ್ಯಾಟಿಂಗ್ ಮಾಡುವ ವೇಳೆ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಜಾಡೇಜಾ 2ನೇ ಇನ್ನಿಂಗ್ಸ್‍ನಲ್ಲಿ ಬೌಲಿಂಗ್ ಮಾಡದಿರುವುದು ಆಸೀಸ್‍ಗೆ ನೆರವಾಯಿತು. ಈಗ ಜಡ್ಡು ಟೂರ್ನಿಯಿಂದಲೇ ಹೊರಗುಳಿ ಯುವ ಅಪಾಯದಲ್ಲಿದ್ದಾರೆ.

ಬೂಮ್ರಾಗೂ ಕೊಕ್:
ಸಿಡ್ನಿ ಟೆಸ್ಟ್‍ನಲ್ಲಿ ರಕ್ಷಣಾತ್ಮಕ ಆಟವಾಡಿ ಭಾರತ ತಂಡವು ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಿದ್ದ ಮಧ್ಯಮಕ್ರಮಾಂಕದ ಬ್ಯಾಟ್ಸ್‍ಮನ್ ಹನುಮವಿಹಾರಿ ಕೂಡ ಕೊನೆಯ ಟೆಸ್ಟ್‍ನಿಂದ ಹೊರಗುಳಿದಿದ್ದಾರೆ, ಇನ್ನು ತಂಡದಲ್ಲಿರುವ ಪ್ರಮುಖ ಬೌಲರ್ ಆಗಿರುವ ಜಸ್‍ಪ್ರೀತ್ ಬೂಮ್ರಾ ಅವರು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿರುವುದರಿಂದ ಅಂತಿಮ ಟೆಸ್ಟ್‍ನಿಂದ ಹೊರಗುಳಿದಿದ್ದಾರೆ. ಸಿಡ್ನಿ ಟೆಸ್ಟ್‍ನಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ತಂಡದ ಯುವ ವಿಕೆಟ್‍ಕೀಪರ್ ರಿಷಭ್‍ಪಂತ್, ಖ್ಯಾತ ಸ್ಪಿನ್ನರ್ ರವಿಚಂದ್ರನ್À ಅಶ್ವಿನ್ ಅವರು ಕೂಡ ಗಾಯಾದ ಸಮಸ್ಯೆಗಳಿಂದ ಬಳಲುತ್ತಿದ್ದು ಅಂತಿಮ ಟೆಸ್ಟ್‍ನಲ್ಲಿ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಶಂಕೆ ಮೂಡಿದೆ.

ವೇಗಿಗಳ ಕೊರತೆ:
ಟೂರ್ನಿ ಆರಂಭಕ್ಕೂ ಮುನ್ನ ಇಶಾಂತ್ ಶರ್ಮಾ ಹೊರಗುಳಿದಿದ್ದರಿಂದ ಭಾರತಕ್ಕೆ ಬೌಲಿಂಗ್ ಸಮಸ್ಯೆ ಕಾಡಿತು. ನಂತರ ಟೂರ್ನಿಯ ಮಧ್ಯೆ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಉಮೇಶ್‍ಯಾದವ್, ಅಂತಿಮ ಟೆಸ್ಟ್‍ನಿಂದ ಜಸ್‍ಪ್ರೀತ್ ಬೂಮ್ರಾ ಅವರು ಹೊರ ನಡೆದಿರುವುದರಿಂದ ಈಗ ಭಾರತ ತಂಡಕ್ಕೆ ವೇಗಿಗಳ ಕೊರತೆ ಕಾಡುತ್ತಿದೆ.

ಯುವ ಪಡೆಗೆ ಛಾನ್ಸ್:
ಭಾರತ ತಂಡದ ಪ್ರಮುಖ ಆಟಗಾರರು ಗಾಯಾದ ಸಮಸ್ಯೆಯಿಂದ ಬಳಲುತ್ತಿರುವುದು ಯುವ ಆಟಗಾರರಿಗೆ ವರದಾನವಾಗಿದೆ. ಈಗಾಗಲೇ ಮೊಹಮ್ಮದ್ ಶಮಿ ಜಾಗದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಶಿರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಉಮೇಶ್‍ಯಾದವ್ ಬದಲಿಗೆ ಬಂದ ನವದೀಪ್ ಶೈನಿ ಕೂಡ ಶೈನ್ ಆಗಿದ್ದಾರೆ, ಈಗ ಜಸ್‍ಪ್ರೀತ್ ಬೂಮ್ರಾ ಸ್ಥಾನ ತುಂಬಲು ಪೈಪೆಪೋಟಿ ನಡೆಸುತ್ತಿರುವ ಶಾರ್ದೂಲ್ ಠಾಕೂರ್ ಹಾಗೂ ನಟರಾಜನ್ ಹಾಗೂ ಜಾಡೇಜಾ ಸ್ಥಾನವನ್ನು ತುಂಬುವ ಅವಕಾಶ ಪಡೆಯುವ ನಿರೀಕ್ಷೆಯಲ್ಲಿರುವ ಕುಲ್‍ದೀಪ್ ಯಾದವ್‍ಗೆ ಭಾರತ ತಂಡದಲ್ಲಿ ಮಿಂಚಲು ಉತ್ತಮ ಛಾನ್ಸ್ ದೊರೆತಿದೆ.

ಮಯಾಂಕ್- ಷಾ ಪೈಪೋಟಿ:
ಸಿಡ್ನಿ ಟೆಸ್ಟ್‍ನ ರಕ್ಷಾತ್ಮಕ ಆಟಗಾರ ಹನುಮವಿಹಾರಿ ಅಂತಿಮ ಟೆಸ್ಟ್‍ನಿಂದ ಹೊರಗುಳಿದಿರುವುದರಿಂದ ಆ ಸ್ಥಾನಕ್ಕಾಗಿ ಕನ್ನಡಿಗ ಮಯಾಂಕ್ ಅಗರ್‍ವಾಲ್ ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಷಾ ನಡುವೆ ಪೈಪೋಟಿ ಏರ್ಪಟ್ಟಿದ್ದು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments