ಗೃಹಿಣಿಯರ ಆರ್ಥಿಕ ಅಭಿವೃದ್ಧಿಗೆ ಆನ್‍ಲೈನ್ ಕೌಶಲ್ಯ ತರಬೇತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 29- ಬ್ರಿಟಾನಿಯಾ ಮಾರೀ ಗೋಲ್ಡ್ ತನ್ನ ವಾರ್ಷಿಕ ಬ್ರಿಟಾನಿಯಾ ಮಾರೀ ಗೋಲ್ಡ್ ಮೈ ಸ್ಟಾರ್ಟಪ್ ಉಪಕ್ರಮದ ದ್ವಿತೀಯ ಋತುವನ್ನು ಪ್ರಕಟಿಸಿದ್ದು ಇದು ಉದ್ಯಮಶೀಲತೆಯ ಆಲೋಚನೆಗಳ ಗೃಹಿಣಿಯರಿಗೆ ಹಣಕಾಸಿನ ನೆರವು ನೀಡುತ್ತದೆ.  ಈ ವರ್ಷ ಉದ್ಯಮಶೀಲತೆಯ ಆಕಾಂಕ್ಷೆಗಳುಳ್ಳ ಮಹಿಳೆಯರಿಗೆಂದೇ ರೂಪಿಸಲಾದ ಮೊಟ್ಟಮೊದಲ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಅಭಿವೃದ್ಧಿ ನಿಗಮ(ಎನ್‍ಎಸ್‍ಡಿಸಿ)ಯೊಂದಿಗೆ ಸಹಯೋಗ ಹೊಂದಿದೆ.

ದೇಶಾದ್ಯಂತ 10,000 ಗೃಹಿಣಿಯರು ಈ ಆನ್‍ಲೈನ್ ಸರ್ಟಿಫಿಕೇಷನ್ ಕೋರ್ಸ್ ಅನ್ನು ಏಪ್ರಿಲ್ ಮತ್ತು ಜೂನ್ 2020ರ ನಡುವೆ ಪಡೆಯಲಿದ್ದಾರೆ. ಈ ಆನ್‍ಲೈನ್ ತರಬೇತಿ ಉದ್ಯಮಶೀಲತೆಯ ಎಲ್ಲ ಹಂತಗಳನ್ನೂ ಸ್ಪರ್ಶಿಸಲಿದೆ.  ಬ್ರಿಟಾನಿಯಾ ಮಾರೀ ಗೋಲ್ಡ್ ಮೈ ಸ್ಟಾರ್ಟಪ್ ಉಪಕ್ರಮವನ್ನು ಭಾರತದ ಗೃಹಿಣಿಯರಿಗೆ ಆರ್ಥಿಕವಾಗಿ ಸ್ವತಂತ್ರವಾಗಲು ಮತ್ತು ಅವರನ್ನು ಉದ್ಯೋಗ ಸೃಷ್ಟಿಸುವವರನ್ನಾಗಿ ಪರಿವರ್ತಿಸಲು ನೆರವಾಗಲು ವಿನ್ಯಾಸಗೊಳಿಸಲಾಗಿದೆ.

ಇ-ಕೋರ್ಸ್‍ಗಳು ಮಹಿಳೆಯರಿಗೆ ಮೂಲಭೂತ ಸಂವಹನ ಕೌಶಲ್ಯಗಳು, ಹಣಕಾಸು ಸಾಕ್ಷರತೆಯನ್ನು ಮಾಹಿತಿ ಹಾಗೂ ಸಂವಹನ ತಂತ್ರಜÁ್ಞನ(ಐಸಿಟಿ), ಮತ್ತು ಸಾಮಾಜಿಕ ಆರ್ಥಿಕ ಸ್ವಾವಲಂಬನೆಗೆ ಕಿರು ಉದ್ಯಮಶೀಲತೆಯ ಕೌಶಲ್ಯಗಳೊಂದಿಗೆ ಸನ್ನದ್ಧಗೊಳಿಸುತ್ತವೆ. ಈ ತರಬೇತಿಯ ಆನ್‍ಲೈನ್ ಸ್ವರೂಪವು ದೇಶಾದ್ಯಂತ ತಮ್ಮ ಮನೆಗಳಲ್ಲಿಯೇ ಕೋರ್ಸ್‍ಗಳನ್ನು ಪಡೆಯಲು ಸುಲಭ ಲಭ್ಯತೆ ಒದಗಿಸುತ್ತವೆ.

Facebook Comments