ಪಿಎಸ್ಐ ಅಕ್ರಮದಲ್ಲಿ ಬಂಧನದಲ್ಲಿರುವ ಆರೋಪಿಯ ಅಣ್ಣ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಮೇ11- ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂತನಾಗಿರುವ ಆರೋಪಿಯ ಅಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ ವಾಸು(48) ಆತ್ಮಹತ್ಯೆಗೆ ಶರಣಾದವರು.
ತಾಲ್ಲೂಕಿನ ಗುಂಜೇವು ಗ್ರಾಮದಲ್ಲಿ ವಾಸು ದಂಪತಿ ವಾಸವಾಗಿದ್ದು, ಇವರ ಪತ್ನಿ ಗಾರ್ಮೆಂಟ್ಸ್ ಉದ್ಯೋಗಿ.

ಒಂದು ಮೂಲದ ಪ್ರಕಾರ ವಾಸು ಹಾಗೂ ಅವರ ಸಹೋದರ ಮನುಕುಮಾರ್ ಮಧ್ಯೆ ಅಷ್ಟಾಗಿ ಸಂಪರ್ಕವಿರಲಿಲ್ಲ ಎಂಬ ಮಾತು ಕೇಳಿಬಂದಿದೆ. ಪಿಎಸ್ಐ ಹುದ್ದೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮನುಕುಮಾರ್ 50ನೇ ರ್ಯಾಂಕ್ ಪಡೆದಿದ್ದನು.

ತದನಂತರ ನಡೆದ ಬೆಳವಣಿಗೆಯಲ್ಲಿ ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಸಿದಂತೆ ಮನುಕುಮಾರ್ನನ್ನು ಪೊಲೀಸರು ಮೂರು ದಿನಗಳ ಹಿಂದೆ ಬಂಸಿದ್ದಾರೆ.

ಇದೀಗ ವಾಸು ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಾಕತಾಳೀಯವೇ ಅಥವಾ ಸಹೋದರ ಬಂತನಾಗಿರುವುದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ವೈಯಕ್ತಿಕ ಕಾರಣಗಳೇನಾದರೂ ಇವೆಯೇ ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೊಳೇನರಸಿಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin