ದಾಯಾದಿಗಳ ಕಲಹ ಅಣ್ಣನ‌ ಕೊಲೆಯಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ.ಜೂ.1. ಜಮಿನು ವಿಚಾರವಾಗಿ ಸಹೋದರರ ನಡೆವೆ ನಡೆದ ಜಗಳ ಅಣ್ಣನ‌ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆಯಲ್ಲಿ ನಡೆದಿದೆ. ಬಾಲಕೃಷ್ಣ (54) ತಮ್ಮನಿಂದ ಕೊಲೆಯಾದ ಅಣ್ಣ.

ಬಾಲಕೃಷ್ಣ ಹಾಗೂ ಸುರೇಶ್ ಸಹೋದರರಾಗಿದ್ದು ಮೈಸೂರಿನಲ್ಲಿ ವಾಸವಾಗಿದ್ದ ಮೃತ ಬಾಲಕೃಷ್ಣ ಲಾಕ್ ಡೌನ್ ಹಿನ್ನಲೆಯಲ್ಲಿ ಊರಿಗೆ ಬಂದಿದ್ದು.ಒಂದೆ ಮನೆಯಲ್ಲಿ ಗೊಡೆ ಹಾಕಿಕೊಂಡು ಪ್ರತ್ಯೆಕವಾಗಿ ವಾಸವಿದ್ದರು.. ಜಮಿನು ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೊಪಕ್ಕೆ ತಿರುಗಿ ಸುರೇಶ್ ಅಣ್ಣನಿಗೆ ಚಾಕುವಿನಿಂದ ಇರಿದಿದ್ದಾನೆ.ಜಗಳ ಬಿಡಿಸಲು ಬಂದ ರಾಮಕೃಷ್ಣ ನ‌ ಹೆಂಡತಿಗೂ ಇರಿದಿದ್ದಾನೆ.ಗಾಯಗೊಂಡ ಅತ್ತಿಗೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಈ ಸಂಬಂಧ ಶ್ರೀ ರಂಗಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಬೆಟಿ ನಿಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

Facebook Comments