ಸಹೋದರರ ಡಬಲ್ ಮರ್ಡರ್, ಬೆಚ್ಚಿಬಿದ್ದ ಗುಮ್ಮಟ ನಗರ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಫೆ.23- ಸಹೋದರರನ್ನು ಮಾರಕಾಸ್ತ್ರಗಳಿಂದ ಕತ್ತು ಕುಯ್ದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಗಾಂಧಿ ಚೌಕ ಹಾಗೂ ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಲೀಂ ಕುಚಬಲ್(33) ಹಾಗೂ ರಝಾಕ್ ಕುಚಬಲ್(28) ಕೊಲೆಯಾಗಿರುವ ಅಣ್ಣ-ತಮ್ಮಂದಿರು. ನಿನ್ನೆ ತಡರಾತ್ರಿ ನಗರದ ಜಯ ಕರ್ನಾಟಕ ಕಾಲನಿಯಲ್ಲಿ ಸಲೀಂ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದರೆ, ತಮ್ಮ ರಝಾಕ್ ಅವರನ್ನು ಗಾಂಧಿ ವೃತ್ತದ ಸರಕಾರಿ ಕಾಲೇಜು ಬಳಿಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದ್ದು, ಮೃತ ಸಹೋದರರು ಕೂಲಿ ಕಾರ್ಮಿಕರಾಗಿದ್ದರು ಎಂದರು ತಿಳಿದುಬಂದಿದೆ. ವಿಜಯಪುರ ನಗರದ ಗಾಂಧಿ ಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ ಪಿ ಅಶೋಕ್, ಗೋಲಗುಮ್ಮಟ ಪಿಎಸ್ ಐ ಕಲ್ಲೂರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments