ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ : ಬಿಎಸ್ವೈ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಸೆ.19- ಯಾರು ಸಹ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ. ಅವರಿಗೆ ಅವರದ್ದೇ ಆದಂತಹ ಶಕ್ತಿ ಹಾಗೂ ತಂತ್ರಗಾರಿಕೆ ಇರುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಿಗೆ ಎಚ್ಚರಿಸಿದರು.ದಾವಣಗೆರೆಯ ತ್ರಿಶೂಲ್ ಭವನದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಕಾರಕ್ಕೆ ತರುವಲ್ಲಿ ಯಶಸ್ವಿಯಗಬೇಕಾಗಿದೆ. ಎಸ್ಸಿ -ಎಸ್ಟಿ ಹಿಂದುಳಿದ ಸಮುದಾಯದ ಜನರನ್ನು ಪಕ್ಷಕ್ಕೆ ಸೇರಿಸಬೇಕಾಗಿದೆ. ಆಗ ಮತ್ತಷ್ಟು ಪಕ್ಷ ಬಲವಾಗುತ್ತದೆ ಎಂದರು.

ನಾವು ಅಕಾರದಲ್ಲಿ ಇದ್ದಾಗ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಿದ್ದೆವು. ಮೊದಲೆಲ್ಲ ಸಮಾವೇಶದಲ್ಲಿ ಐವತ್ತು -ಅರವತ್ತು ಸಾವಿರ ಜನರು ಸೇರುತ್ತಿದ್ದರು. ಅವರೇ ಗಾಡಿಗಳನ್ನು ಮಾಡಿಕೊಂಡು ಬರುತ್ತಿದ್ರು. ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದರು.

ಯಡಿಯೂರಪ್ಪ ನವರ ಪ್ರವಾಸ ಬಗ್ಗೆ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಒಬ್ಬರೇ ರಾಜ್ಯ ಪ್ರವಾಸಕ್ಕೆ ಹೋಗುವ ಪ್ರಸಂಗ ಬಂದಿಲ್ಲ, ನಾನು ಪ್ರವಾಸಕ್ಕೆ ಹೋಗುವಾಗ ಶಾಸಕರು, ಸಚಿವರು ಕಾರ್ಯಕರ್ತರು ಇರುತ್ತಾರೆ. ನಾಲ್ಕು ತಂಡಗಳನ್ನು ಮಾಡಿ ರಾಜ್ಯ ಪ್ರವಾಸ ಮಾಡಬೇಕಿದೆ ಎಂದರು.

ಪ್ರತಿಯೊಂದು ಬೂತ್‍ಗಳಲ್ಲಿ ಪಕ್ಷ ಸಂಘಟನೆಯಾಗಬೇಕು, ಮನೆಮನೆಗೆ ಮೋದಿಯವರು ಕಾರ್ಯಕ್ರಮವನ್ನು ತಲುಪಿಸಬೇಕಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಸಾಕಷ್ಟು ಉತ್ತಮ ಅಡಳಿತ ನಡೆಸಿದ್ರು. ಆದರೆ ಅದು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಫಲವಾಗಿದ್ದರು ಎಂದುರು.

ದೇಗುಲಗಳ ತೆರವು ಬಗ್ಗೆ ಚರ್ಚೆ ಯಾಗುತ್ತಿದೆ. ಯಾವುದೇ ಕಾರಣಕ್ಕೂ ದೇಗುಲಗಳ ತೆರವು ಮಾಡುವುದಿಲ್ಲ, ಸುಪ್ರೀಂ ಕೋರ್ಟ್ ತೀರ್ಪು ಬಂದರೆ ಮೇಲ್ಮನವಿಯನ್ನು ಸಲ್ಲಿಸುತ್ತೇವೆ, ದೇವಸ್ಥಾನ ಗಳನ್ನು ಕೆಡವುದನ್ನು ನಿಲ್ಲಿಸಲು ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಒಂದೆರಡು ಘಟನೆಗಳಿಂದ ಕಾರ್ಯಕರ್ತರು ನೋವು ಮಾಡಿಕೊಳ್ಳಬಾರದು.

ಮೋದಿಯವರ ಹೆಸರು ಹೇಳಿಕೊಂಡು ಗೆಲುವು ಸಾಸದೆ ನಮ್ಮ ಕೆಲಸದಿಂದ ಗೆಲುವು ಸಾಸೋಣ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು.

Facebook Comments

Sri Raghav

Admin