ಟ್ವಿಟ್ಟರ್ ಮೂಲಕ ಮತದಾರರಲ್ಲಿ ಸಿಎಂ ಯಡಿಯೂರಪ್ಪ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.5- ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಕರ್ನಾಟಕ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ. ನಿಮ್ಮ ಮತ ಸ್ಥಿರ ಸರ್ಕಾರಕ್ಕೆ, ನಿಮ್ಮ ಮತ ಸದೃಢ ಸರ್ಕಾರಕ್ಕೆ, ಎಂಬ ಸಂದೇಶ ನೀಡಿದ್ದಾರೆ.

ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ನಿಮ್ಮ ಮತ ಸ್ಥಿರ ಸರ್ಕಾರಕ್ಕೆ ನಿಮ್ಮ ಮತ ಸದೃಢ ಸರ್ಕಾರಕ್ಕೆ ಮತದಾನ ಪ್ರತಿಯೊಬ್ಬರ ಹಕ್ಕು. ಒಂದೊಂದು ಮತವೂ ಅತ್ಯಮೂಲ್ಯ. ರಾಜ್ಯದ ಉತ್ತಮ ಪ್ರಗತಿಗಾಗಿ ತಪ್ಪದೆ ನಿಮ್ಮ ಮತ ಚಲಾಯಿಸಿ. ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ. ನವ ಕರ್ನಾಟಕ ನಿರ್ಮಾಣವೇ ನಮ್ಮ ಧ್ಯೇಯ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿಸುವ ಮೂಲಕ ಸ್ಥಿರ ಸರ್ಕಾರ ರಚನೆಗೆ ಕೈ ಜೋಡಿಸಿ ಎಂದು ಹೇಳಿದ್ದಾರೆ.

Facebook Comments