ಮತ್ತಷ್ಟು ಆಕ್ಟಿವ್ ಆದ ಮಾಜಿ ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈಗ ಸಾಕಷ್ಟು ಕ್ರಿಯಾಶೀಲರಾಗಿದ್ದಾರೆ. ಮುಖ್ಯಮಂತ್ರಿಯಾದಾಗ ಇದ್ದ ಕ್ರಿಯಾಶೀಲತೆಗಿಂತ ಹೆಚ್ಚು ಕ್ರಿಯಾಶೀಲರಾಗಿ ಸದನದಲ್ಲಿ ಪಾಲ್ಗೊಂಡು ಶಾಸಕರಿಗೆ ಸಲಹೆಗಳನ್ನು ನೀಡುತ್ತ ಹುರಿದುಂಬಿಸುತ್ತಿದ್ದುದು ಕಂಡುಬಂತು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪನವರು ಆಕ್ಟೀವ್ ಆಗಿ ಇರುವುದಿಲ್ಲ.

ಅವರು ಸದನದ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹಲವರು ತಿಳಿದಿದ್ದರು. ಆದರೆ, ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಜತೆಯಲ್ಲಿಯೇ ಹೆಜ್ಜೆ ಹಾಕುತ್ತ ಬಂದ ಅವರು, ಕಲಾಪದಲ್ಲಿ ತಮಗೆ ನಿಗದಿಯಾದ ಸ್ಥಳದಲ್ಲಿ ಕುಳಿತು ತದೇಕಚಿತ್ತರಾಗಿ ಕಲಾಪ ವೀಕ್ಷಿಸಿದ್ದಲ್ಲದೆ ತಮ್ಮ ಆಪ್ತರಿಗೆ ಹಾಗೂ ಶಾಸಕರಿಗೆ ಅಗತ್ಯ ಸಲಹೆ-ಸಹಕಾರ ನೀಡಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಸೂಕ್ತವಾದ ಸಲಹೆಗಳನ್ನು ಬಿಎಸ್‍ವೈ ನೀಡಿದ್ದಾರೆ.

ಬೆಲೆ ಏರಿಕೆ, ಕೊರೊನಾ ಸಂಕಷ್ಟದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಮುಂದಾಗಿವೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಹೇಗೆ ನಿಭಾಯಿಸಬೇಕೆಂದು ಸರ್ಕಾರಕ್ಕೆ ಸಲಹೆ-ಸಹಕಾರ ನೀಡುತ್ತಿದ್ದಾರೆ.

ರಾಜೀನಾಮೆ ನೀಡಿದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಂತರ ಕಾಯ್ದುಕೊಳ್ಳಲಿದ್ದಾರೆ ಎಂದು ಪರಿಗಣಿಸಲಾಗಿತ್ತು. ಆದರೆ, ಸಾಕಷ್ಟು ಸಕ್ರಿಯವಾಗಿರುವ ಯಡಿಯೂರಪ್ಪನವರು ಈಗ ಸರ್ಕಾರಕ್ಕೆ ಹ್ಯುಮಿನಿಟಿ ಬೂಸ್ಟ್ ಆಗಿದ್ದಾರೆ. ಎಂಎಲ್‍ಎಗಳಿಗೆ ಮತ್ತಷ್ಟು ಸ್ಫೂರ್ತಿಯಾಗಿದ್ದಾರೆ.

Facebook Comments