ಬಿಎಸ್‍ವೈ ಪ್ರವಾಸದತ್ತ ಬಿಜೆಪಿ ನಾಯಕರ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.11- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ಯಡಿಯೂರಪ್ಪ ಹೊಸ ರಾಜಕೀಯ ಹೆಜ್ಜೆ ಇರಿಸಲು ಗಣೇಶ ಚತುರ್ಥಿ ಆಯ್ಕೆ ಮಾಡಿಕೊಂಡಿರುವ ಕಾರಣ ಇದೀಗ ಎಲ್ಲರ ಚಿತ್ತ ಬಿಎಸ್‍ವೈ ಪ್ರವಾಸದತ್ತ ನೆಟ್ಟಿದೆ. ಆದರೆ,ಯಡಿಯೂರಪ್ಪ ಪ್ರವಾಸದ ಬಗ್ಗೆ ಸದ್ಯ ಪಕ್ಷದಲ್ಲಿ ಗೊಂದಲವಿದೆ. ಹೈಕಮಾಂಡ್ ಸಮ್ಮತಿ ನೀಡಿದೆಯೋ ಇಲ್ಲವೋ ಎನ್ನುವ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

ಯಡಿಯೂರಪ್ಪ ಏಕಾಂಗಿ ಪ್ರವಾಸ ಮಾಡುತ್ತಾರಾ? ಸ್ಥಳೀಯ ನಾಯಕರೊಂದಿಗೆ ಪ್ರವಾಸ ಮಾಡಲಿದ್ದಾರಾ? ರಾಜ್ಯ ನಾಯಕರು ಬಿಎಸ್‍ವೈ ಪ್ರವಾಸಕ್ಕೆ ಸಹಕಾರ ನೀಡುತ್ತಾರಾ? ಎಂಬ ಬಗ್ಗೆಯೂ ಗೊಂದಲವಿದೆ.

ಸೋಮವಾರದಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದೆ. 10 ದಿನಗಳ ಕಾಲ ಕಲಾಪ ನಡೆಯಲಿದೆ. ಇಂತಹ ಸಮಯದಲ್ಲಿ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಅಲ್ಲದೆ, ಅಧಿವೇಶನದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಮಾರ್ಗದರ್ಶನ, ಅಗತ್ಯ ಸಲಹೆ ನೀಡುವ ನಿರೀಕ್ಷೆ ಇದೆ. ಎಲ್ಲಾ ಶಾಸಕರು, ಸಚಿವರು ಕಲಾಪದಲ್ಲಿ ಭಾಗಿಯಾಗಬೇಕಿರುವ ಕಾರಣ ಅಧಿವೇಶನ ಮುಗಿಯುವವರೆಗೂ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವುದಿಲ್ಲ ಎನ್ನಲಾಗುತ್ತದೆ.

Facebook Comments