ಬಿಎಸ್-4 ವಾಹನಗಳ ನೋಂದಣಿಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ. 28-ಬಿಎಸ್-4 ಮಾಪನದ ವಾಹನಗಳ ಮಾಲೀಕರು ಮಾ.31ಕ್ಕಿಂತ ಮೊದಲು ಮಾರಾಟವಾಗಿ ತಾತ್ಕಾಲಿಕ ನೋಂದಣಿ ಹೊಂದಿರುವ ಮತ್ತು ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ತೆರಿಗೆ ಹಾಗೂ ಶುಲ್ಕ ಪಾವತಿಸಿರುವ, ಪಾವತಿಸಬೇಕಿರುವ ವಾಹನ ಮಾಲೀಕರು ಏ.30ರವರೆಗೆ ಮಾತ್ರ ನಿಯಮಾನುಸಾರ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬಿಎಸ್-4 ಮಾಪನದ ವಾಹನ ಮಾಲೀಕರು ಸಂಬಂಸಿದ ನೋಂದಣಿ ಪ್ರಾಕಾರದಲ್ಲಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin