ಬಿಎಸ್ಎನ್ಎಲ್ ಉಗ್ರಾಣ ಕೊಠಡಿಗೆ ಆಕಸ್ಮಿಕ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಮಾ.16 ನಗರದ ಬೆಲ್ಟ್ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿಯ ಉಗ್ರಾಣ ಕೊಠಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕೇಬಲ್‍ಗಳು ಸುಟ್ಟು ಕರಕಲಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ನಗರದ ಬೆಲ್ಟ್ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿ ಬಳಿಯ ಮರಗಳಿಂದ ಉದುರಿದ್ದ ಒಣಗಿದ ಎಲೆಗಳಿಗೆ ಅಪರಿಚಿತರು ಬೆಂಕಿ ಹಾಕಿದ್ದು, ಈ ಬೆಂಕಿ ಬಿಎಸ್ಎನ್ಎಲ್ ಕಚೇರಿಗೆ ವ್ಯಾಪಿಸಿದ ಪರಿಣಾಮ ಕಚೇರಿ ಕೊಠಡಿಯೊಂದರಲ್ಲಿ ಸಂಗ್ರಹಿಸಿದ್ದ ಭಾರೀ ಮೊತ್ತದ ಕೇಬಲ್‍ಗಳು ಬೆಂಕಿಗೆ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆಯಂತೆ?

ಬೆಂಕಿ ಕೇಬಲ್‍ಗಳಿಗೆ ತಗಲಿದ ಪರಿಣಾಮ ಕಟ್ಟಡದಲ್ಲಿ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಧಟ್ಟ ಹೊಗೆ ಇಡೀ ಆವರಣದಾದ್ಯಂತ ವ್ಯಾಪಿಸಿತ್ತು. ಇದರಿಂದಾಗಿ ಅಕ್ಕಪಕ್ಕದ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸುಮಾರು 1 ಗಂಟೆಗಳ ಕಾಲ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಚ್ಚಲಾಗಿದೆಯೇ ಅಥವಾ ಆಕಸ್ಮಿಕವೋ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇಬಲ್‍ಗಳಿಗೆ ಬೆಂಕಿ ತಗಲಿದ ಪರಿಣಾಮ ಆಗಿರುವ ನಷ್ಟ ಎಂಬ ಬಗ್ಗೆಯೂ ಅಂದಾಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ

Facebook Comments