BREAKING : ಬಿಜೆಪಿ ಅಡ್ಡಿ, ಅರ್ಧಕ್ಕೆ ಭಾಷಣ ನಿಲ್ಲಿಸಿ ಹೊರನಡೆದ ರಾಜ್ಯಪಾಲರು..!

ಈ ಸುದ್ದಿಯನ್ನು ಶೇರ್ ಮಾಡಿ

Session--01

ಬೆಂಗಳೂರು,ಫೆ.6-ರಾಜ್ಯಪಾಲ ವಿ.ಆರ್.ವಾಲಾ ಅವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಅಪರೂಪದ ಪ್ರಸಂಗ ನಡೆಯಿತು.

ಬೆಳಗ್ಗೆ 11 ಗಂಟೆಗೆ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಪಾಲ ವಿ.ಆರ್.ವಾಲಾ ಅವರು ಸದನವನ್ನು ಉದ್ದೇಶಿಸಿ ವಿಧಾನಸಭೆಗೆ ಆಗಮಿಸಿದರು.

ರಾಷ್ಟ್ರ ಗೀತೆ ಮುಗಿಯುತ್ತಿದ್ದಂತೆ ಭಾಷಣ ಓದಲು ಆರಂಭಿಸುತ್ತಿದ್ದಂತೆ ಬಿಜೆಪಿಯ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಒಟ್ಟು 22 ಪುಟಗಳ ಭಾಷಣದಲ್ಲಿ ರಾಜ್ಯಪಾಲರು ಮೊದಲ ಒಂದು ಪುಟ್ಟ ನಂತರ ಕೊನೆಯ ಒಂದು ಪುಟವನ್ನು ಓದಿ ಭಾಷಣವನ್ನು ಮುಗಿಸಿದರು.
ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಾಗ ರಾಜ್ಯಪಾಲರು ಸಂಪೂರ್ಣವಾಗಿ ಓದಬೇಕೆ ಇಲ್ಲವೇ ಕೊನೆಯ ಪುಟವನ್ನು ಓದಬೇಕೆ ಎಂಬುದರ ಬಗ್ಗೆ ವಿಧಾನಸಭೆ ಸ್ಪೀಕರ್ ರಮೇಶ್‍ಕುಮರ್ ಅವರ ಸಲಹೆ ಕೇಳಿದರು.

ಕೊನೆಯ ಪುಟವನ್ನು ಓದಿ ಭಾಷಣವನ್ನು ಮುಗಿಸಿ ಎಂದು ಹೇಳುತ್ತಿದ್ದಂತೆ ರಾಜ್ಯಪಾಲರು ಭಾಷಣಕ್ಕೆ ಇತೀಶ್ರೀ ಹಾಡಿದರು.  ಪ್ರತಿಪಕ್ಷದ ಸದಸ್ಯರು, ಬಹುಮತವಿಲ್ಲದ ಸರ್ಕಾರ ಬಜೆಟ್ ಮಂಡಿಸಲು ಮುಂದಾಗಿದೆ. ಬಜೆಟ್ ಮಂಡಿಸುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದರು.

ಇದೊಂದು ರೈತ ವಿರೋಧಿ ಸರ್ಕಾರ. ಬಹುಮತವಿಲ್ಲದೆ ಬಜೆಟ್ ಮಂಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ಹಿಂದೆ ಬಿಜೆಪಿ ಆಡಳಿತವಿದ್ದ ಸಂದರ್ಭದಲ್ಲಿ ಅಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದ ವೇಳೆ ಅಡ್ಡಿಪಡಿಸಿದ್ದರು.

BJP--Protest-01

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin