ವಿದ್ಯುತ್ ಸ್ಪರ್ಶಿಸಿ ಎಮ್ಮೆಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ಮೇ 30- ನಾಲೆಯ ಬಳಿ ನೀರು ಕುಡಿಯಲು ಹೋದ ಎಮ್ಮೆಗಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಹೊಸಹೊಳಲು ಗ್ರಾಮದ ವಿಜಯನಗರ ಬಡಾವಣೆಯ ನಿವಾಸಿ ಯಶೋಧಮ್ಮ ಅವರಿಗೆ ಸೇರಿದ ಎರಡು ಎಮ್ಮೆಗಳು ಸಾವನ್ನಪ್ಪಿವೆ.

ನಾಲೆಯ ಬಳಿ ನೀರು ಕುಡಿಯಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಎರಡು ಎಮ್ಮೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದರೂ ಸಹ ಸರಿಪಡಿಸದ ಕಾರಣ ಈ ಅನಾಹುತ ಸಂಭವಿಸಿದೆ.

ಇದರಿಂದ ರೈತ ಮಹಿಳೆ ಯಶೋಧಮ್ಮ ಅವರಿಗೆ ಸುಮಾರು 80ಸಾವಿರ ರೂಗಳು ನಷ್ಟವಾಗಿದೆ. ಹಾಗಾಗಿ ಚೆಸ್ಕಾಂ ಅಧಿಕಾರಿಗಳು ಕೂಡಲೇ ಮೃತ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳನ್ನು ಬದಲಾಯಿಸಬೇಕು ಎಂದು ಪುರಸಭಾ ಸದಸ್ಯರಾದ ಎಚ್.ಆರ್.ಲೋಕೇಶ್, ಎಚ್.ಎನ್.ಪ್ರವೀಣ್, ಹೆಚ್.ಡಿ.ಅಶೋಕ್, ಮುಖಂಡ ಎಚ್.ಎಸ್.ರಘು ಚೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Facebook Comments