ದೆಹಲಿಯಲ್ಲಿ ಮತ್ತೊಂದು ಬೆಂಕಿ ಅನಾಹುತ, ಬೆಂಕಿ ಸ್ಫೋಟಕ್ಕೆ ಕಟ್ಟಡ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.2- ರಾಜಧಾನಿಯಲ್ಲಿ ಮತ್ತೊಂದು ಬೆಂಕಿ ಅನಾಹುತ ಮತ್ತು ಕಟ್ಟಡ ಕುಸಿತ ದುರಂತ ಸಂಭವಿಸಿದ್ದು, ಸಾವು-ನೋವಿನ ಶಂಕೆ ವ್ಯಕ್ತವಾಗಿದೆ.  ಉಧೋ ನಗರ ಪ್ರದೇಶದ ಪಿರಾಘರಿಯಲ್ಲಿ ಇಂದು ಮುಂಜಾನೆ ಕೈಗಾರಿಕೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸ್ಫೋಟದಿಂದ ಕಟ್ಟಡ ಕುಸಿಯಿತು.

ಉರುಳಿದ ಕಟ್ಟಡದ ಭಗ್ನಾವಶೇಷಗಳಡಿ ಐವರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕೆಲವರು ಸಿಲುಕಿದ್ದು, ಸಾವು-ನೋವಿನ ಶಂಕೆ ವ್ಯಕ್ತವಾಗಿದೆ.  ಬೆಳಗ್ಗೆ 4.23ರಲ್ಲಿ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಕೈಗಾರಿಕಾ ಕಟ್ಟಡದತ್ತ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಸ್ಫೋಟ ಸಂಭವಿಸಿ ಕಟ್ಟಡ ಕುಸಿದುಬಿತ್ತು.

ಸುದ್ದಿ ತಿಳಿದು ಹೆಚ್ಚುವರಿ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಸಲಾಯಿತು.  ಘಟನೆ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ದೆಹಲಿಯಲ್ಲಿ ಎರಡು ಕಡೆ ಸಂಭವಿಸಿದ ಪ್ರಮುಖ ಅಗ್ನಿ ಆಕಸ್ಮಿಕಗಳಲ್ಲಿ 52ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.

Facebook Comments