3 ಅಂತಸ್ತುಗಳ ಕಟ್ಟಡ ಕುಸಿದು 10 ಮಂದಿ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಸೆ.21-ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿ ನಗರದಲ್ಲಿ ಇಂದು ನಸುಕಿನಲ್ಲಿ ಮೂರು ಮಹಡಿಗಳ ಕಟ್ಟಡವೊಂದು ಕುಸಿದು ಏಳು ಮಕ್ಕಳೂ ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ನಾಲ್ಕು ತಿಂಗಳ ಮಗು ಸೇರಿದಂತೆ 11 ಜನರನ್ನು ರಕ್ಷಿಸಲಾಗಿದೆ. ಕುಸಿದು ಬಿದ್ದ ಕಟ್ಟಡಗಳ ಭಗ್ನಾವಶೇಷಗಳಲ್ಲಿ ಇನ್ನೂ 15ಕ್ಕೂ ಹೆಚ್ಚು ಜನರು ಸಿಲುಕಿದ್ದು, ಅವರ ರಕ್ಷಣೆಗಾಗಿ ಕಾರ್ಯಚರಣೆ ಮುಂದುವರಿದಿದೆ.

ಮುಂಬೈ ಸಮೀಪವೇ ಇರುವ ಥಾಣೆ ಜಿಲ್ಲೆಯಿಂದ 10 ಕಿ.ಮೀ. ದೂರದಲ್ಲಿರುವ ವಿದ್ಯುತ್ ಮಗ್ಗಗಳಿಗೆ ಹೆಸರಾದ ಭೀವಂಡಿ ನಗರದ ಧಮನ್‍ಕರ್ ನಾಕಾ ಪ್ರದೇಶದ ನಾಪೆರ್ಲಿ ಪಟೇಲ್ ಕಾಂಪೌಂಡ್‍ನಲ್ಲಿ 43 ವರ್ಷಗಳಷ್ಟು ಹಳೆಯದಾದ ಮೂರು ಅಂತಸ್ತುಗಳ ಜಿಲಾನಿ ಕಟ್ಟಡ ಇಂದು 3.45ರ ನಸುಕಿನಲ್ಲಿ ಕುಸಿದುಬಿತ್ತು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಥಾಣೆ ವಿಪತ್ತು ನಿರ್ವಹಣಾ ದಳ(ಟಿಡಿಆರ್‍ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‍ಡಿಆರ್‍ಎಫ್) ಮತ್ತು ಇತರ ರಕ್ಷಣಾ ಸಂಸ್ಥೆಗಳ ಕಾರ್ಯಕರ್ತರು ಕಟ್ಟಡದ ಆವಶೇಷಗಳಿಂದ ಈವರೆಗೆ 10 ಮಂದಿಯ ಶವವನ್ನು ಹೊರ ತೆಗೆದಿದ್ದಾರೆ. ಮೃತರಲ್ಲಿ ಏಳು ಮಕ್ಕಳೂ ಸೇರಿದ್ದಾರೆ.

ಈ ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಭಗ್ನಾವಶೇಷಗಳಡಿ ಇನ್ನೂ 15 ಮಂದಿ ಸಿರುಲಿಕಿದ್ದು ಅವರ ರಕ್ಷಣೆ ಕಾರ್ಯ ಪ್ರಗತಿಯಲ್ಲಿದೆ. ಈ ಕಟ್ಟಡದಲ್ಲಿ 10 ಫ್ಲಾಟ್‍ಗಳು ಇದ್ದು, ಸುಮಾರು 150 ಮಂದಿ ವಾಸಿಸುತ್ತಿದ್ದರು ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ವಾನ ದಳವನ್ನು ಬಳಸಿ ಆವಶೇಷಗಳಿಂದ ನಿವಾಸಿಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಎನ್‍ಡಿಆರ್‍ಎಫ್ ಮಹಾ ನಿರ್ದೇಶಕ ಎಸ್.ಎನ್.ಪ್ರಧಾನ್ ತಿಳಿಸಿದ್ದಾರೆ.

Facebook Comments