ಭೀವಂಡಿ ಕಟ್ಟಡ ಕುಸಿತ : ಮೃತರ ಸಂಖ್ಯೆ 35ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಸೆ.23-ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿ ನಗರದಲ್ಲಿ ಮೂರು ಅಂತಸ್ತುಗಳ ಹಳೆ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ.

ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಕಟ್ಟಡದ ಭಗ್ನಾವಶೇಷ ಗಳಿಂದ ಇನ್ನೂ ಎಂಟು ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 35ಕ್ಕೇರಿವೆ ಎಂದು ರಕ್ಷಣಾ ಕಾರ್ಯಾಚರಣೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರು ಹಸುಳೆಗಳೂ ಸೇರಿದಂತೆ 2 ರಿಂದ 14ರ ವಯೋಮಾನದ 15 ಮಕ್ಕಳೂ ಸಹ ಈ ದುರಂತದಲ್ಲಿ ಅಸು ನೀಗಿದ್ಧಾರೆ.  ಈವರೆಗೆ 25 ಜನರನ್ನು ಆವಶೇಷಗಳಿಂದ ಜೀವಂತವಾಗಿ ಹೊರಗೆ ತಂದು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಾಯಾಳುಗಳಿಗೆ ಭೀವಂಡಿ ಮತ್ತು ಥಾಣೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

Facebook Comments