ಬುಲೆಟ್ ಟ್ರೈನ್‍ಗೂ ಕೋವಿಡ್ ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.5- ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮುಂಬೈ-ಅಹಮದಾಬಾದ್ ನಡುವಣ ಬುಲೆಟ್ ಟ್ರೈನ್ ಯೋಜನೆಗೆ ಕೊರೊನಾ ಹೆಮ್ಮಾರಿ ಅಡ್ಡಿಯಾಗಿದೆ.

2020-23ರ ಡಿಸೆಂಬರ್ ಅಂತ್ಯದ ವೇಳೆಗೆ ಬುಲೆಟ್ ಟ್ರೈನ್ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಗಡುವು ನಿಗದಿಗೊಳಿಸಿತ್ತು. ಆದರೆ, ಕೋವಿಡ್ ಹಾವಳಿಯಿಂದ ಟೆಂಡರ್‍ಗಳ ಆಹ್ವಾನ, ಭೂ ಸ್ವಾಧೀನ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅಡ್ಡಿಯುಂಟಾಗಿದೆ.

ಇದರಿಂದಾಗಿ ಇನ್ನು ಮೂರು ವರ್ಷಗಳೊಳಗೆ ಈ ಯೋಜನೆ ಪೂರ್ಣಗೊಳ್ಳು ವುದು ಅನುಮಾನ. ಕೊರೊನಾ ವೈರಸ್ ಹಾವಳಿ ಯಿಂದಾಗಿ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಪಟ್ಟ ಅನೇಕ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.

Facebook Comments