ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಉದ್ದವ್ ಠಾಕ್ರೆ ಕೊಕ್ಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.2-ಅಹಮಾದಾಬ್-ಮುಂಬೈ ನಡುವಣ ಬುಲೆಟ್ ಟ್ರೈನ್ ಸಂಚಾರದ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಕೊಕ್ಕೆ ಹಾಕುವುದು ಬಹುತೇಕ ಖಚಿತವಾಗಿದೆ.

ಭಾರತದ ಪ್ರಪ್ರಥಮ ಬುಲೆಟ್ ಟ್ರೈನ್ ಯೋಜನೆಯನ್ನು ಮರು ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳುವ ಮೂಲಕ ಇದು ಕಾರ್ಯಗತಗೊಳ್ಳುವುದು ಅನುಮಾನ ಎಂಬ ಸೂಚನೆ ನೀಡಿದ್ದಾರೆ.

ನಿನ್ನೆ ತಡ ರಾತ್ರಿ ಸುದ್ದಿಗಾರರೊಂದಿಗೆ ಮಾತನಾ ಡಿದ ಠಾಕ್ರೆ, ಹಿಂದಿನ ಬಿಜೆಪಿ ಸರ್ಕಾರದ ವಿವಾದಾತ್ಮಕ ಅಭಿವೃದ್ಧಿ ಯೋಜನೆಗಳನ್ನು ಮರು ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು. ನಮ್ಮ ರೈತರು ಈಗಾಗಲೇ ಬುಲೆಟ್ ಟ್ರೈನ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೃಷಿಕರು ಮತ್ತು ಮಹಾರಾಷ್ಟ್ರ ಜನತೆಯ ಹಿತಾಸಕ್ತಿ ಬಲಿಕೊಟ್ಟು ಇದನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗದು ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಈಗಾಗಲೇ ಐದು ಲಕ್ಷ ಕೋಟಿ ಸಾಲದ ಹೊರೆ ಇದೆ. ಜನತೆ ಮೇಲೆ ಮತ್ತಷ್ಟು ಸಾಲ ಹೊರಿಸಲು ನಾವು ಸಿದ್ಧ ಇಲ್ಲ. ರೈತರ ಸಾಲ ಮನ್ನಾ ಮತ್ತು ಬಡ ಜನರ ಕಲ್ಯಾಣವೇ ನಮ್ಮ ಮೂಲ ಉದ್ದೇಶ ಎಂದರು.

Facebook Comments