ನದಿಯಲ್ಲಿ ಸಜೀವ ಗುಂಡುಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ.10-ಇತ್ತೀಚೆಗೆ ಟಿ.ನರಸೀಪುರ ಠಾಣೆಯಲ್ಲಿ ನಾಪತ್ತೆಯಾಗಿದ್ದ ಸಜೀವ ಗುಂಡುಗಳು ನಂಜನಗೂಡಿನ ಕಪಿಲಾ ನದಿಯಲ್ಲಿ ಪತ್ತೆಯಾಗಿವೆ.

ಪ್ರಕರಣದ ಪ್ರಮುಖ ಆರೋಪಿ ರೈಟರ್ ಕೃಷ್ಣೇಗೌಡ ಅವರು ಈಗಾಗಲೇ 30 ಸಜೀವ ಗುಂಡುಗಳನ್ನು ಒಪ್ಪಿಸಿದ್ದರು. ಉಳಿದ 20 ಗುಂಡುಗಳು ನಂಜನಗೂಡು ರೈಲ್ವೆ ಸೇತುವೆ ಸಮೀಪ ಕಪಿಲಾ ನದಿಯಲ್ಲಿ ಎಸೆದಿರುವುದಾಗಿ ಕೃಷ್ಣೇಗೌಡ ತಿಳಿಸಿದ್ದರು.

ಹೆಚ್ಚುವರಿ ಎಸ್‍ಪಿ ಸ್ನೇಹಾ ನೇತೃತ್ವದ ತನಿಖಾ ತಂಡ ನಿನ್ನೆ ಸಂಜೆ ಆರೋಪಿ ಕೃಷ್ಣೇಗೌಡ ಸಮ್ಮುಖದಲ್ಲಿ ಕಪಿಲಾ ನದಿಯಲ್ಲಿ ಗುಂಡುಗಳಿಗೆ ಶೋಧ ಕಾರ್ಯ ನಡೆಸಿದರು. ಸತತ ಎರಡು ಗಂಟೆಗಳ ಶೋಧದ ನಂತರ 20 ಸಜೀವ ಗುಂಡುಗಳು ನದಿಯಲ್ಲಿ ಪತ್ತೆಯಾಗಿವೆ. ಕೃಷ್ಣೇಗೌಡರ ವಿಚಾರಣೆ ಮುಂದುವರಿದಿದೆ.

ಆತ ಗುಂಡುಗಳನ್ನು ಏತಕ್ಕಾಗಿ ಕಳವು ಮಾಡಿದ್ದ ಮತ್ತು ನದಿಯಲ್ಲಿ ಏಕೆ ಎಸೆದಿದ್ದ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಈ ವೇಳೆ ಹೆಚ್ಚುವರಿ ಎಸ್‍ಪಿ ಸ್ನೇಹಾ ಅವರು ಸುದ್ದಿಗಾರರಿಗೆ ತಿಳಿಸಿದರು.

Facebook Comments