ಬೂಮ್ರಾ, ಪೂನಮ್‍ಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ. 12- ಟೀಂ ಇಂಡಿಯಾದ ವೇಗದ ಬೌಲರ್ ಜಸ್‍ಪ್ರೀತ್ ಬೂಮ್ರಾ ಹಾಗೂ ಮಹಿಳಾ ತಂಡದ ಖ್ಯಾತ ಸ್ಪಿನ್ನರ್ ಪೂನಂಯಾದವ್ ಅವರು ಪ್ರತಿಷ್ಠಿತ ಪಾಲಿಉಮ್ರಿಗಾರ್ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಜೀವಮಾನ ಸಾಧನೆಗಾಗಿ ನೀಡುವ ಸಿ.ಕೆ. ನಾಯ್ಡು ಪ್ರಶಸ್ತಿಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ಅಜುಂ ಚೋಪ್ರಾ ಅವರು ಆಯ್ಕೆಯಾಗಿದ್ದು ಇಂದು ಸಂಜೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

2018-19ರ ಸಾಲಿನಲ್ಲಿ ಕ್ರಿಕೆಟ್ ಅಂಗಳದಲ್ಲಿ ತೋರಿದ ಮಹತ್ತರ ಸಾಧನೆಯನ್ನು ಗುರುತಿಸಿ ಪಾಲಿ ಉಮ್ರಿಗಾರ್ ಪ್ರಶಸ್ತಿಯನ್ನು ನೀಡ ಲಾಗುತ್ತದೆ. ಜಸ್‍ಪ್ರೀತ್ ಬೂಮ್ರಾ ಭಾರತ ತಂಡದ ಶ್ರೇಷ್ಠ ಬೌಲರ್ ಅಲ್ಲದೆ ಕ್ರಿಕೆಟ್‍ನ ಅಂಗಳದಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್‍ಇಂಡೀಸ್ ತಂಡಗಳ ವಿರುದ್ಧ ಐದು ವಿಕೆಟ್ ಕಬಳಿಸಿದ ಏಷ್ಯಾದ ಮೊದಲ ಬೌಲರ್ ಆಗಿರುವುದೇ ಅಲ್ಲದೆ ಟ್ವೆಂಟಿ-20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿಗೂ ಬೂಮ್ರಾ ಭಾಜನರಾಗಿದ್ದಾರೆ.

ಕ್ರಿಕೆಟ್ ಜೀವನದಲ್ಲಿ ತೋರಿದ ಸಾಧನೆಗಾಗಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಮಹಿಳಾ ಆಟಗಾರ್ತಿ ಪೂನಂ ಯಾದವ್, ಟ್ವೆಂಟಿ-20 ರ್ಯಾಂಕಿಂಗ್ ಪಟ್ಟಿಯಲ್ಲಿ 2ನೆ ಸ್ಥಾನದಲ್ಲಿರುವುದೇ ಅಲ್ಲದೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಯೂ ಗುರುತಿಸಿ ಕೊಂಡಿದ್ದಾರೆ.

Facebook Comments