ದಟ್ಟ ಕಾಡಲ್ಲಿ ಎತ್ತರದ ಮರದ ಮೇಲಿನ ಮನೆಯಲ್ಲಿ ವಾಸ ಮಾಡ್ತಿದ್ದ ಕುಖ್ಯಾತ ಕಳ್ಳ..!

ಈ ಸುದ್ದಿಯನ್ನು ಶೇರ್ ಮಾಡಿ

ಪೊಮೊನಾ(ಕ್ಯಾಲಿಫೋರ್ನಿಯಾ), ಮೇ 25- ಅಮೆರಿಕದ ಕ್ಯಾಲಿಫೋರ್ನಿಯಾದ ಪೊಮೊನಾ ಪ್ರಾಂತ್ಯದ ದಟ್ಟ ಅರಣ್ಯದ ಎತ್ತರದ ಮರವೊಂದರ ಮೇಲೆ ಪತ್ತೆಯಾದ ಅತ್ಯಾಧುನಿಕ ವ್ಯವಸ್ಥೆಯ ಮನೆಯೊಂದರ ಸುಳಿವನ್ನು ಆಧರಿಸಿ ಪೊಲೀಸರು ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಕ್‍ಡೂಡಾ (56) ಬಂಧಿತ ಕುಖ್ಯಾತ ಕಳ್ಳ. ಪೊಮೊನಾ ಪ್ರಾಂತ್ಯದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಈ ಬಗ್ಗೆ ವ್ಯಾಪಕ ದೂರುಗಳು ದಾಖಲಾಗಿದ್ದವು. ಕಳ್ಳನನ್ನು ಹಿಡಿಯಲು ಪೊಲೀಸರು ತೀವ್ರ ಶೋಧ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಲಿಲ್ಲ.

ಆದರೆ, ವ್ಯಕ್ತಿಯೊಬ್ಬ ಪೊಮೊನಾ ಅರಣ್ಯ ಪ್ರದೇಶದ ಮರವೊಂದರ ಮೇಲೆ ಮನೆಯೊಂದು ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದ್ದ. ಇದನ್ನು ಆಧರಿಸಿ ಪೊಲೀಸರು ಆ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಿದ್ದರು.

ಹೆಲಿಕಾಪ್ಟರ್ ಸಹಾಯದಿಂದ ಪೊಲೀಸರು ಮರದ ಮನೆಯೊಳಗೆ ಇಳಿದಾಗ ಅಲ್ಲಿದ್ದ ವ್ಯವಸ್ಥಿತ ಸೌಲಭ್ಯಗಳನ್ನು ಕಂಡು ಬೆರಗಾದರು. ಆಧುನಿಕ ಮನೆಯಲ್ಲಿದ್ದ ಸಕಲಸೌಲಭ್ಯಗಳು ಈ ಪುಟ್ಟದ ಮರದ ಮನೆಯಲ್ಲಿ ಇದ್ದವು.

ನಂತರ ಅಲ್ಲೇ ಅವಿತಿಟ್ಟುಕೊಂಡು ಕಳ್ಳನಿಗಾಗಿ ಕಾದಿದ್ದ ಪೊಲೀಸರಿಗೆ ಮಾರ್ಕ್ ರಾತ್ರಿ ವೇಳೆ ತನ್ನ ವಿಚಿತ್ರ ವಾಸದ ನಿವಾಸಕ್ಕೆ ಆಗಮಿಸಿದಾಗ ಆತನನ್ನು ಸೆರೆ ಹಿಡಿದರು. ಬಂಧಿನನ್ನು ವಿಚಾರಣೆಗೊಳಪಡಿಸಿ ಹಣ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin