ರೈತ ಆಂದೋಲನ : ಕೇಂದ್ರ ಕಾಯ್ದೆ ಪ್ರತಿ ಸುಟ್ಟು ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.13- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಮೂರು ಕೃಷಿ ಕಾಯ್ದೆಗಳ ವಿರುದ್ಧ ಧರಣಿ ನಡೆಸುತ್ತಿರುವ ರೈತರು, ಕಾಯ್ದೆ ಪ್ರತಿಗಳನ್ನು ಸುಡುವುದರ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ವೋಚ್ಛ ನ್ಯಾಯಾಲಯ ಮಂಗಳವಾರ ಕೃಷಿ ಕಾನೂನುಗಳಿಗೆ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿ ಸಮಿತಿ ರಚಿಸಿದೆ. ರೈತ ಸಂಘಗಳು, ಮುಖಂಡರು ಹಾಗೂ ಧರಣಿ ನಿರತರೊಂದಿಗೆ ಸಮಿತಿ ಚರ್ಚಿಸಿ ವರದಿ ಸಲ್ಲಿಸಲು ಸಮಿತಿಗೆ ಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಗತಿ ತಿಳಿದೂ ರೈತರು ಎಂಎಸ್‍ಪಿ ಸೇರಿದ ಮೂರು ಕಾಯ್ದೆಗಳ ಪ್ರತಿಗಳನ್ನು ಸುಡುವುದರ ಮೂಲಕ ಲೋಹ್ರಿ ಹಬ ಆಚರಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಟ್ಟಿಗೆ ರಾಶಿ ಹಾಕಿ ಸುಡುವ ಮೂಲಕ ಕಾಮನ ಹಬ್ಬ ಆಚರಿಸುವ ರೀತಿ ಉತ್ತರ ಭಾರತದಲ್ಲಿ, ಚಳಿಗಾಲದಲ್ಲಿ ಲೋಹ್ರಿ ಹಬ್ಬ ಆಚರಿಸುತ್ತಾರೆ. ಅದೇ ರೀತಿ ಧರಣಿ ನಿರತ ರೈತರು ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ಪ್ರತಿಭಟನಾ ರೀತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ.

ಮುಂದಿನ ನಡೆ ಪ್ರಕಟ ಇಂದು: ದೇಶದ 40 ರೈತ ಸಂಘಟನೆಗಳನ್ನು ಹೊಂದಿರುವ ಸಂಕ್ಯುಯ್ತ ಕಿಸಾನ್ ಮೋರ್ಚಾ ಇಂದು ಸಭೆ ನಡೆಸಿ ಮುಂದಿನ ನಡೆಯನ್ನು ಪ್ರಕಟಿಸಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿ, ¾¾ಕೇಂದ್ರ ಸರ್ಕಾರ ಬೆಂಬಲಿತ¿¿ ಸಮಿತಿಯಂದಿತಿದೆ. ಆದ್ದರಿಂದ ಸಮಿತಿ ಮುಂದೆ ಯಾವುದೇ ರೈತ ಸಂಘಟನೆಗಳು ಹಾಗೂ ರೈತರು ಹಾಜರಾಗುವುದಿಲ್ಲ. ಸಮಿತಿ ಪ್ರತಿನಿಧಿಗಳು ರೈತ ಸಂಘಟನೆಗಳು ಹಾಗೂ ಪ್ರತಿಭಟನಾ ನಿರತ ರೈತರ ಬಳಿಗೆ ಖುದ್ದಾಗಿ ಬರಬೇಕಿದೆ.

ಆದರೆ, ರೈತರು ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಗೌರವ ನೀಡಿ, ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಅವರು ನೀಡಿದ ಆದೇಶವನ್ನು ಸ್ವಾಗತಿಸಿದ್ದಾರೆ.  ಆದರೂ, ಕೇಂದ್ರ ಸರ್ಕಾರ ಎಂಎಸ್‍ಪಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹರಿಯಾಣ, ಪಂಜಾಬ್ ಹಾಗೂ ದೇಶದ ಇತರ ಕಡೆಗಳಿಂದ ರೈತರು ಆಂದೋಲನ ಮುಂದುವರಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

Facebook Comments