ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 30ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ,ಸೆ.24- ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 30ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಗಾಯಗೊಂಡಿರುವ ಘಟನೆ ಆಗ್ರಾ ಎಕ್ಸ್‍ಪ್ರೆಸ್‍ವೇಯಲ್ಲಿ ಉತ್ತರ ಪ್ರದೇಶದ ಕನ್ನೌಜ್‍ನ ತಾಲ್ಗ್ರಾಮ್ ಪ್ರದೇಶದಲ್ಲಿ ನಡೆದಿದೆ.

30ಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದ ಖಾಸಗಿ ಬಸ್ ಬಿಹಾರ ಬೆಟ್ಟಯ್ಯದಿಂದ ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್‍ನಲ್ಲಿದ್ದ ಗಾಯಾಳುಗಳನ್ನು ತಿರ್ವಾ ವೈದ್ಯಕೀಯ ಕಾಲೇಜು ಮತ್ತು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಹಾರದ  ಬೆಟ್ಟಯ್ಯದಿಂದ ದೆಹಲಿಗೆ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಖಾಸಗಿ ಬಸ್ ತಾಲ್ಗ್ರಾಮ್ ಪ್ರದೇಶದ ಮೈಲಿಗಲ್ಲು 149ರ ಬಳಿ ರಸ್ತೆ ವಿಭಾಜಕವನ್ನು ಹತ್ತಿದ ನಂತರ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.

ಇದೇ ವೇಳೆ ಬಸ್‍ನ ಇಂಜಿನ್ ಓವರ್ ಹೀಟ್ ಆಗಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ಬಸ್‍ನಲ್ಲಿದ್ದ 125 ಕಾರ್ಮಿಕರ ಪೈಕಿ 30ಕ್ಕೂ ಹೆಚ್ಚು ಜನರಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಯಾವುದೇ ಪ್ರಣಾಪಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗೊಂಡವರನ್ನು ಚಿಕಿತ್ಸೆ ಕೊಡಿಸಿ ಕಳುಹಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments