ಚಾಲಕನ ನಿರ್ಲಕ್ಷ್ಯ: ವಿದ್ಯುತ್ ಟಿಸಿಗೆ ಡಿಕ್ಕಿ ಹೊಡೆದ ಬಸ್, ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಜು.3- ಬಸ್ ಚಾಲಕ ನಿದ್ದೆಗೆ ಜಾರಿದ ಪರಿಣಾಮ ವಿದ್ಯುತ್ ಟಿಸಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಭಾರೀ ಅನಾಹುತವೊಂದು ತಪ್ಪಿರುವ ಘಟನೆ ವಿಜಯಪುರದ ಇಂಡಿ ಪಟ್ಟಣದಲ್ಲಿ ನಡೆದಿದೆ.

ಬಸ್ ಬಳ್ಳಾರಿಯಿಂದ ಇಂಡಿಗೆ ಆಗಮಿಸುತ್ತಿತ್ತು. ಈ ವೇಳೆ ಬಸ್ ವಿದ್ಯುತ್ ಟಿಸಿಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೇ ರಸ್ತೆಯ ಡಿವೈಡರ್‍ಗೂ ಡಿಕ್ಕಿ ಹೊಡೆದು ಇಂಡಿ ಪಟ್ಟಣದ ಸ್ಟೇಟ್ ಬ್ಯಾಂಕ್ ಕಟ್ಟಡಕ್ಕೆ ಜಾಗ್ಗಿದೆ. ಬಸ್ ಡಿಕ್ಕಿಯಾದ ಕೂಡಲೇ ಟಿಸಿ ಟ್ರಿಪ್ ಆಗಿದೆ. ಇದನ್ನು ಅರಿತ ಹೆಸ್ಕಾಂನ ಇಂಡಿ ಶಾಖಾಧಿಕಾರಿ ಗುರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಬಸ್ ಚಾಲಕ ಬೆಳಗ್ಗಿನ ಜಾವ 5:30ರ ಸುಮಾರಿಗೆ ನಿದ್ರೆಗೆ ಜಾರಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿದ್ದ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅವಘಡದ ಬಳಿಕ ಪ್ರಯಾಣಿಕರು ಬೇರೆ ಬಸ್‍ನಲ್ಲಿ ತೆರಳಿದ್ದಾರೆ.

ಈ ಬಗ್ಗೆ ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments