ಬಸ್-ಟೆಂಪೊ ಮುಖಾಮುಖಿ, ಟೆಂಪೊ ಚಾಲಕ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಜ.6- ಕೆಎಸ್ಆರ್‌ಟಿಸಿ ಬಸ್ ಹಾಗೂ ಮಹಿಂದ್ರಾ ಪಿಕಪ್ ವಾಹನದ ನಡುವೆ ತಡರಾತ್ರಿ ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಪಿಕಪ್ ವಾಹನದ ಚಾಲಕ ದರ್ಶನ್‍ಗೆ ಗಭೀರ ಗಾಯಗಳಾದರೆ, ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೀಕನಹಳ್ಳಿ ಸಮೀಪದ ಬೂತಪ್ಪನಗುಡಿ ಸಮೀಪ ನಡೆದಿದೆ.

ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ದರ್ಶನ್ ಸ್ನೇಹಿತರಾದ ಮದನ್ ಮತ್ತು ಚಂದ್ರುರೊಂದಿಗೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ಹಿರಿವಾಟೆ ಗ್ರಾಮದ ತಮ್ಮ ತೋಟಕ್ಕೆ ಕೆಲಸದ ನಿಮಿತ್ತ ತೆರಳಿ, ಕೆಲಸ ಮುಗಿದ ನಂತರ ರಾತ್ರಿ ತೋಟದಿಂದ ತಮ್ಮ ಮಹಿಂದ್ರಾ ಪಿಕಪ್ ವಾಹನದಲ್ಲಿ ವಾಪಸ್ ಮನೆಗೆ ಬರುವಾಗ ಈ ಘಟನೆ ಸಂಭವಿಸಿದೆ.

ಬೇಲೂರು ತಾಲೂಕಿನ ಚೀಕನಹಳ್ಳಿಯ ಭೂತಪ್ಪನ ಗುಡಿ ತಿರುವಿನಲ್ಲಿ ರಾತ್ರಿ 12 ಘಂಟೆ ಸಮಯದಲ್ಲಿ, ಮೂಡಿಗೆರೆಯಿಂದ ಬೆಂಗಳೂರಿಗೆ ಹೋಗಲು ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಅಪಘಾತ ನಡೆದಿದೆ.  ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Facebook Comments