Tuesday, April 16, 2024
Homeರಾಜ್ಯಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆ ಡಕಾಯಿತಿ

ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆ ಡಕಾಯಿತಿ

ಬೆಂಗಳೂರು, ಡಿ.5- ಪೊಲೀಸರ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಡಕಾಯಿತರ ತಂಡ ಮನೆಯಲ್ಲಿದ್ದವರಿಗೆ ಡ್ರ್ಯಾಗರ್ ಹಾಗೂ ಮಚ್ಚು ತೋರಿಸಿ ಬೆದರಿಸಿ ಹಲ್ಲೆ ಮಾಡಿ 60 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಎಚ್‍ಎಂಟಿ ಲೇಔಟ್‍ನಲ್ಲಿ ಉದ್ಯಮಿ ಮನೋಹರ್ ಮನೆಯಿದೆ. ಪೀಣ್ಯಾದಲ್ಲಿ ಕಾರ್ಖಾನೆ ಹೊಂದಿರುವ ಇವರು ರಾತ್ರಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮನೆಯಲ್ಲಿ ಇವರ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಇದ್ದರು.

ರಾತ್ರಿ 7.30ರ ಸುಮಾರಿನಲ್ಲಿ ಪೊಲೀಸರ ಸೋಗಿನಲ್ಲಿ ಬಂದ 5-6 ಮಂದಿಯ ಡಕಾಯಿತರ ತಂಡ ನಿಮ್ಮ ಮನೆ ಪರಿಶೀಲಿಸಬೇಕೆಂದು ಏಕಾಏಕಿ ಉದ್ಯಮಿ ಮನೆಗೆ ನುಗ್ಗಿ ಕಿರುಚಾಡದಂತೆ ಉದ್ಯಮಿಯ ಪತ್ನಿ ಹಾಗೂ ಪುತ್ರನಿಗೆ ಮಚ್ಚು , ಡ್ರ್ಯಾಗರ್ ತೋರಿಸಿ ಬೆದರಿಸಿದ್ದಲ್ಲದೆ ರೂಪೇಶ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಅಕ್ರಮ ಗಣಿಗಾರಿಕೆ ನಡೆಸುವವರಿಂದ 87.51 ಕೋಟಿ ರೂ. ದಂಡ ವಸೂಲಿ

ನಂತರ ಮನೆಯೆಲ್ಲಾ ಜಾಲಾಡಿ ಕೈಗೆ ಸಿಕ್ಕಿದ 60 ಲಕ್ಷ ಹಣ ಹಾಗೂ 400 ರಿಂದ 500 ಗ್ರಾಂ ಚಿನ್ನಾಭರಣ ದೋಚಿಕೊಂಡು ಮನೆಗೆ ಅಳವಡಿಸಿದ್ದ ಸಿಸಿಟಿಯ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ. ಉದ್ಯಮಿ ಮನೋಹರ್ ಅವರು ಮನೆಗೆ ಬಂದಾಗ ನಡೆದ ವಿಷಯವನ್ನು ಕುಟುಂಬಸ್ಥರು ತಿಳಿಸಿದ್ದು ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಡಕಾಯಿತರಿಂದ ಹಲ್ಲೆಗೊಳಗಾಗಿರುವ ರೂಪೇಶ್‍ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೀಣ್ಯಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಈ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ಡಕಾಯಿತರ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News