ಬೆಂಗಳೂರಿನಲ್ಲಿ ಜಾರಿಗೆ ಬಂತು ಬಸ್‍ಲೇನ್ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.16- ನಗರದಲ್ಲಿ ಹೆಚ್ಚಾಗುತ್ತಿರುವ ವಾಹನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಬಸ್‍ಲೇನ್ ಯೋಜನೆ ಪ್ರಾಯೋಗಿಕ ಆರಂಭ ಪಡೆದಿದೆ.  ಕೆಆರ್ ಪುರದಿಂದ ಇಬ್ಬಲೂರು ವರೆಗಿನ 12ಕಿ.ಮೀ.ವರೆಗಿನ ರಸ್ತೆಯಲ್ಲಿ ಇಂದಿನಿಂದ ಬಸ್‍ಲೇನ್ ಕಡ್ಡಾಯಗೊಳಿಸಲಾಗಿದೆ.

ಇಬ್ಬಲೂರಿನಿಂದ ಸಿಲ್ಕ್‍ಬೋರ್ಡ್ ಜಂಕ್ಷನ್‍ವರೆಗಿನ ಬಸ್‍ಲೇನ್ ಕಾಮಗಾರಿ ಪ್ರಗತಿಯಲ್ಲಿದ್ದು, ನವೆಂಬರ್ ಅಂತ್ಯದ ವೇಳೆಗೆ ಈ ರಸ್ತೆಯಲ್ಲಿ ಬಸ್‍ಲೇನ್ ಕಡ್ಡಾಯಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದ್ದಾರೆ.

ಕೆಆರ್ ಪುರದಿಂದ ಇಬ್ಬಲೂರುವರೆಗಿನ ಬಸ್‍ಲೇನ್‍ಗಳಲ್ಲಿ ಬೇರೆ ಇತರ ವಾಹನಗಳು ಸಂಚರಿಸಬಾರದು. ಅದೇ ರೀತಿ ಬಿಎಂಟಿಸಿ ಬಸ್ ಚಾಲಕರು ಬಸ್‍ಲೇನ್‍ನಲ್ಲೇ ಸಂಚರಿಸುವ ಮೂಲಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅನಿಲ್‍ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಅತಿ ಹೆಚ್ಚು ವಾಹನದಟ್ಟಣೆ ಇರುವ ಈ ರಸ್ತೆಯಲ್ಲಿ ವಾಹನ ಸವಾರರು ನಿಯಮಗಳನ್ನು ಪಾಲಿಸಿದರೆ ದಟ್ಟಣೆ ಕಡಿಮೆಗೊಳ್ಳುವ ಸಾಧ್ಯತೆಗಳಿವೆ. ಈ ಬಸ್‍ಲೇನ್ ವ್ಯವಸ್ಥೆಯಿಂದ ಉತ್ತಮ ಫಲಿತಾಂಶ ಬಂದಿದ್ದೇ ಆದಲ್ಲಿ ನಗರದ ಇತರ ಹಲವು ವಾಹನ ದಟ್ಟಣೆ ರಸ್ತೆಗಳಲ್ಲೂ ಬಸ್‍ಲೇನ್ ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ತೀರ್ಮಾನಿಸಿದೆ.

Facebook Comments