ಮದ್ಯ ಖರೀದಿಗೆ ಬರುವವರನ್ನು ಗೌರವಯುತವಾಗಿ ಕಾಣಬೇಕು : ಹೈಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ, ಸೆ.17- ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ಸಾಲು ನಿಂತವರನ್ನು ಕೀಳಾಗಿ ಕಾಣಬಾರದು ಮತ್ತು ಅವರಿಗೆ ಮುಜುಗರವಾಗುವಂತಹ ಪರಿಸ್ಥಿತಿ ಇರಬಾರದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೇರಳ ಪಾನೀಯ ನಿಗಮ ನಿಯಮಿತದ ವ್ಯಾಪ್ತಿಯಲ್ಲಿರುವ ಮದ್ಯದಂಗಡಿ ಮತ್ತು ಖಾಸಗಿ ವ್ಯಾಪ್ತಿಯಲ್ಲಿರುವ ಅಂಗಡಿಗಳಲ್ಲಿ ಅಬಕಾರಿ ಇಲಾಖೆ ಮದ್ಯ ಖರೀದಿಗೆ ಬರುವವರನ್ನು ಗೌರವವಾಗಿ ಕಾಣುವಂತೆ ಮಾಡಬೇಕು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಪೀಠ ಆದೇಶ ನೀಡಿದೆ.

ಬ್ಯಾಂಕ್ ಶಾಖೆ ಸಮೀಪಕ್ಕೆ ಮದ್ಯದಂಗಡಿ ಸ್ಥಳಾಂತರಿಸಿರುವುದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್‍ಗೆ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ಜನರು ಶಿಸ್ತಿನಿಂದ ಸಾಲಿನಲ್ಲಿ ನಿಲ್ಲುವವರನ್ನು ನೋಡಿ ನಾನೇ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಹೇಳಿರುವ ನ್ಯಾಯಮೂರ್ತಿಗಳು ಮದ್ಯದಂಗಡಿಗೆ ಬರುವವರನ್ನು ಗೌರವದಿಂದ ಕಾಣುವಂತೆ ಮಾಡಲಾಗುವ ಕ್ರಮಗಳ ಬಗ್ಗೆ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಕೇರಳ ಅಬಕಾರಿ ಇಲಾಖೆಗೆ ಸೂಚನೆ ನೀಡಿದ್ದಾರೆ.

Facebook Comments