“ಮೋದಿಜಿ ನಿರುದ್ಯೋಗಿಗಳ ಕಷ್ಟ ನೋಡಲು ಯಾವ ಕನ್ನಡಕ ಬೇಕು ಹೇಳಿ, ತರಿಸಿಕೊಡ್ತೀವಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.3- ನಿರುದ್ಯೋಗಿಗಳ ಕಷ್ಟ ನೋಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯಾವ ರೀತಿಯ ಕನ್ನಡಕಬೇಕು ಹೇಳಿ. ಅದು ಎಷ್ಟೇ ಖರ್ಚಾರಲಿ, ಎಲ್ಲೇ ಇರಲಿ ತರಿಸಿಕೊಡುತ್ತೇವೆ ಎಂದು ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಗ್ರಹಣ ನೋಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಜಪಾನ್‍ನಿಂದ ಕನ್ನಡಕವೊಂದನ್ನು ತರಿಸಿಕೊಂಡಿದ್ದರು.

ದುರಾದೃಷ್ಟವಶಾತ್ ಮೋಡ ಕವಿದಿದ್ದರಿಂದ ಸೂರ್ಯಗ್ರಹಣ ನೋಡಲಾಗಲಿಲ್ಲ, ಕನ್ನಡಕ ಬಳಕೆಯಾಗಲಿಲ್ಲ. ಈಗ ದೇಶಾದ್ಯಂತ ವಿದ್ಯಾವಂತರು, ಕೂಲಿ ಕಾರ್ಮಿಕರು, ರೈತರು, ಕಾರ್ಮಿಕರು, ಯುವಕರು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ.

ಅದು ಮೋದಿ ಅವರಿಗೆ ಕಾಣುತ್ತಿಲ್ಲ. ಯಾವ ಕನ್ನಡಕ ಹಾಕಿದರೆ ನಿರುದ್ಯೋಗಿಗಳ ಕಷ್ಟ ಮೋದಿ ಅವರಿಗೆ ಕಾಣುತ್ತದೆ ಎಂದು ಹೇಳಿದರೆ ಆ ಕನ್ನಡಕವನ್ನು ಎಲ್ಲೇ ಇದ್ದರೂ ತರಿಸಿಕೊಡುತ್ತೇವೆ. ಅದರಿಂದಲಾದರೂ ನಿರುದ್ಯೋಗಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಮೋದಿ ಅವರು ನವೀಲಿಗೆ ಕಾಳು ತಿನ್ನಿಸುವ ಒಂದುವರೆ ವರ್ಷದ ವಿಡಿಯೋ ಬಿಡುಗಡೆ ಆಯ್ತು. ಅದರನ್ನು ತೆಗೆಯಲು ಎಂಟು ಗಂಟೆ ಕಾಲು ಪ್ರಯತ್ನಿಸಲಾಗಿದೆ. ಮೋದಿ ಅವರು ಆರು ಬಾರಿ ಬಟ್ಟೆ ಬದಲಾಯಿಸಿದ್ದಾರೆ. ಅದೇ ರೀತಿ ಊಟ ಇಲ್ಲದೆ ಜನ ಸಾಯುತ್ತಿದ್ದಾರೆ. ಅವರಿಗೆ ಊಟ ಮಾಡಿಸಲು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ.

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‍ ಅವರಿಗೆ ಜಿಡಿಪಿ ಕೇಳಿದರೆ, ನಾನು ಈರುಳ್ಳಿ ತಿನ್ನುವುದಿಲ್ಲ ಎಂದು ಹೇಳಿ ಕಾಮಿಡಿ ಮಾಡುತ್ತಾರೆ. ಈ ಸರ್ಕಾರಕ್ಕೆ ವಿಷನ್ ಇಲ್ಲ, ಕೇವಲ ಟಿಲಿವಿಷನ್‍ನಲ್ಲಿ ಪ್ರಚಾರ ಪಡೆಯುವ ಸರ್ಕಾರ ಎಂದು ಲೇವಡಿ ಮಾಡಿದರು.

Facebook Comments

Sri Raghav

Admin