ಬೆಂಗಳೂರಿಗರಿಗೆ ಶಾಕಿಂಗ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

Drinking-Water

ಬೆಂಗಳೂರು, ಜ.10- ನಗರದ ನಾಗರಿಕರಿಗೆ ನೀರಿನ ದರ ಏರಿಕೆಯ ಬರೆ ಎಳೆಯಲು ಜಲಮಂಡಳಿ ಮುಂದಾಗಿದೆ. ಮಾರ್ಗಸೂಚಿ ದರ, ತೆರಿಗೆ ಹೆಚ್ಚಳ ಮುಂತಾದ ದರಗಳ ಹೆಚ್ಚಳದಿಂದ ತತ್ತರಿಸಿರುವ ನಗರವಾಸಿಗಳು ಈಗ ನೀರಿನ ದರ ಹೆಚ್ಚಳದ ಹೊಡೆತವನ್ನು ತಡೆದುಕೊಳ್ಳಬೇಕಿದೆ. ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆದಾರರ ನೀರಿನ ದರ ಪರಿಷ್ಕರಿಸಲು ಜಲಮಂಡಳಿ ಸಿದ್ಧತೆ ನಡೆಸಿರುವುದು ತಿಳಿದುಬಂದಿದೆ.

ಶೇ.30 ರಿಂದ 35ರಷ್ಟು ನೀರಿನ ದರ ಏರಿಸಲು ಮಂಡಳಿ ಮುಂದಾಗಿದೆ. ವಿದ್ಯುತ್ ಬಿಲ್, ಕೇಬಲ್ ಬಿಲ್ ಎಲ್ಲ ಬಿಲ್‍ಗಳು ಏರಿಕೆಯಾಗಿವೆ. ಈಗ ಕುಡಿಯುವ ನೀರಿನ ಬಿಲ್ ಕೂಡ ಏರಿಕೆಯಾಗಲಿದೆ.

2014ರಲ್ಲಿ ನೀರಿನ ದರ ಹೆಚ್ಚಳ ಮಾಡಲಾಗಿತ್ತು. 2016ರಲ್ಲಿ ನೀರಿನ ದರ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಪ್ರಸ್ತುತ ನೀರಿನ ದರವನ್ನು ಹೆಚ್ಚಿಸಲು ನಿರ್ಧರಿಸಿ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ಮುಂದಾಗಿದೆ. ನಿಖರವಾಗಿ ಎಷ್ಟು, ಯಾವಾಗಿನಿಂದ ಜಾರಿ ಎಂಬುದಷ್ಟೇ ನಿರ್ಧಾರವಾಗಬೇಕಿದೆ.

ಡೀಸೆಲ್ ದರ ಹೆಚ್ಚಳದಲ್ಲಿ ಸಾರಿಗೆ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿತ್ತು. ಸಾರ್ವಜನಿಕರ ತೀವ್ರ ವಿರೋಧದಿಂದ ತೆರಿಗೆ ಹೆಚ್ಚಳದ ದರದ ಪ್ರಸ್ತಾಪವನ್ನು ಕೈಬಿಟ್ಟಿತ್ತು. ಈಗ ನೀರಿನ ದರ ಹೆಚ್ಚಳ ಮಾಡಲು ಮುಂದಾಗಿದೆ. ಕುಡಿಯುವ ನೀರು ಸರಬರಾಜಿನಲ್ಲಿ ಶೇ.40ರಷ್ಟು ಸೋರಿಕೆಯಾಗುತ್ತಿದೆ. ಸೋರಿಕೆಯನ್ನು ತಡೆಗಟ್ಟದ ಇಲಾಖೆ ಮತ್ತೆ ದರ ಹೆಚ್ಚಳಕ್ಕೆ ಮುಂದಾಗಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ