ನಾಳೆ 2 ಲೋಕಸಭಾ, 51 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.20- ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ನಡುವೆ ನಾಳೆ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ. ಬಿಹಾರದ ಸಮಷ್ಟಿಪುರ್ ಮತ್ತು ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಉಪ ಚುನಾವಣೆ ನಡೆಯಲಿದ್ದು , ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಗಳಾಗಿವೆ.

ಅಲ್ಲದೆ 17 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೂ ನಾಳೆ ಉಪ ಚುನಾವಣೆಗಳ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಪ್ರದೇಶ-11, ಗುಜರಾತ್-6, ಕೇರಳ ಮತ್ತು ಬಿಹಾರ್ ತಲಾ 5, ಪಂಜಾಬ್ ಮತ್ತು ಅಸ್ಸಾಂ ತಲಾ 4, ಸಿಕ್ಕಿಂ 3, ತಮಿಳುನಾಡು, ರಾಜಸ್ತಾನ ಮತ್ತು ಆಂಧ್ರಪ್ರದೇಶ ತಲಾ 2 ಹಾಗೂ ಒಡಿಶಾ , ತೆಲಂಗಾಣ, ಮಧ್ಯಪ್ರದೇಶ , ಛತ್ತೀಸ್‍ಗಢ, ಮೇಘಾಲಯ, ಪುದುಚೆರಿ ಮತ್ತು ಅರುಣಾಚಲ ಪ್ರದೇಶಗಳ ತಲಾ ಒಂದೊಂದು ಸ್ಥಾನಗಳ ವಿಧನಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು , ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಚುನಾವಣೆಗೆ ಮುನ್ನ ನಿನ್ನೆ ರಾತ್ರಿ ಈ ರಾಜ್ಯಗಳ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂ. ನಗದನ್ನು ವಿವಿಧೆಡೆ ವಶಪಡಿಸಿಕೊಳ್ಳಲಾಗಿದೆ. ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಳ್ಳಲಿದೆ.

Facebook Comments