Saturday, April 20, 2024
Homeರಾಜ್ಯಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲೆಯ ಮತದಾನ

ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲೆಯ ಮತದಾನ

ಬೆಂಗಳೂರು,ಫೆ.17- ವಿಧಾನಪರಿಷತ್‍ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಶಾಂತಿಯುತ ಮತದಾನವಾಗಿದ್ದು, ಒಟ್ಟಾರೆ ಸುಮಾರು ಶೇ.86.38ರಷ್ಟು ಮತದಾನವಾಗಿದೆ. ಈ ಉಪಚುನಾವಣೆಯ ಮತ ಎಣಿಕೆಯು ಫೆ.20ರಂದು ನಡೆಯಲಿದೆ. ಅಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈ ಚುನಾವಣೆಗೆ ಮತದಾನ ನಡೆದಿದ್ದು, ಈ ಬಾರಿ ದಾಖಲೆಯ ಪ್ರಮಾಣದ ಮತದಾನವಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.83.97, ಬಿಬಿಎಂಪಿ ಕೇಂದ್ರದಲ್ಲಿ ಶೇ.83.19, ಬಿಬಿಎಂಪಿ ಉತ್ತರದಲ್ಲಿ ಶೇ.82.43, ಬಿಬಿಎಂಪಿ ದಕ್ಷಿಣದಲ್ಲಿ 82.51ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ಶೇ.96.02ರಷ್ಟು ಮತದಾನವಾಗಿದ್ದರೆ, ರಾಮನಗರ ಜಿಲ್ಲೆಯಲ್ಲಿ ಶೇ.95.77ರಷ್ಟು ಮತದಾನವಾದ ವರದಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ, ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ ಸೇರಿದಂತೆ ಚುನಾವಣೆಗೆ 9 ಅಭ್ಯರ್ಥಿಗಳು ಸ್ರ್ಪಧಿಸಿದ್ದರು.

ಮುಂದಿನ ಪೀಳಿಗೆಯ ಹೆಚ್-3 ರಾಕೆಟ್ ಉಡಾಯಿಸಿದ ಜಪಾನ್

ಈ ಉಪಚುನಾವಣೆಯಲ್ಲಿ ಚುನಾಯಿತರಾಗುವ ಅಭ್ಯರ್ಥಿಯ ವಿಧಾನಪರಿಷತ್‍ನ ಸದಸ್ಯತ್ವದ ಅವಧಿ 2026ರ ನವೆಂಬರ್ 11ರವರೆಗೆ ಮಾತ್ರ ಇದೆ. ಕಳೆದ ಬಾರಿ ಚುನಾವಣೆಯಂತೆ ಈ ಬಾರಿಯೂ ರಂಗನಾಥ್ ಮತ್ತು ಪುಟ್ಟಣ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಮತದಾನ ಮುಗಿಯುತ್ತಿದ್ದಂತೆ ಈ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

RELATED ARTICLES

Latest News