ಯಡಿಯೂರಿನಲ್ಲಿ ಸಿಎಂ ಕುಟುಂಬದವರಿಂದ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್,ಜೂ.21-ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಮನೆದೇವರಾದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮುಂಜಾನೆಯಿಂದಲೇ ವಿಶೇಷ ಪೂಜೆಯಲ್ಲಿ ತೊಡಗಿದರು.

ನಿನ್ನೆಯೇ ಯಡಿಯೂರಿಗೆ ಭೇಟಿ ನೀಡಿ ದೇವಸ್ಥಾನದಲ್ಲಿ ತಂಗಿದ್ದ ಕುಟುಂಬ ಸದಸ್ಯರು ಹಲವು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವೃಶ್ಚಿಕ ರಾಶಿಗೆ ಅಶುಭ ಫಲವೆಂದು ಶಾಂತಿಗಾಗಿ ಜೋತಿಷ್ಯರ ಸಲಹೆಯಂತೆ ಸಿಎಂ ಕಿರಿಯ ಪುತ್ರ ವಿಜಯೇಂದ್ರ ದಂಪತಿ ಹೋಮ ಹನವನದಂತಹ ವಿಶೇಷ ಪೂಜೆಗಳನ್ನು ನಡೆಸಿದರು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರಿನಲ್ಲೇ ಇದ್ದು, ಪುತ್ರಿಯರು, ಸಂಬಂಧಿಕರು ಮಾತ್ರ ವಿಜಯೇಂದ್ರ ಜೊತೆಗೆ ಆಗಮಿಸಿದ್ದರು.

Facebook Comments