ಬೈಲನರಸಾಪುರಕ್ಕೆ ಕೇಂದ್ರ ವಲಯ ಐಜಿಪಿ ಶರತ್‍ಚಂದ್ರ ಭೇಟಿ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ, ಏ.10- ನಂದಗುಡಿ ಹೋಬಳಿಯ ಬೈಲ ನರಸಾ ಪುರದಲ್ಲಿ ಎರಡು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ವಲಯ ಐಜಿಪಿ ಶರತ್‍ಚಂದ್ರ ಭೇಟಿ ನೀಡಿ ಲಾಕ್‍ಡೌನ್ ಸ್ಥಿತಿಗತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಐಜಿಪಿ ಶರತ್ ಚಂದ್ರ ಮಾತನಾಡಿ, ಸದರಿ ಗ್ರಾಮದೆಲ್ಲಡೆ ವೈರಸ್ ಸೋಂಕು ಇನ್ನಷ್ಟು ವ್ಯಾಪಿಸದಂತೆ ತಡೆಯಲು ಗ್ರಾಮಕ್ಕೆ ನಾಕಾ ಬಂಧಿ ಹಾಕಲಾಗಿದ್ದು, ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳಲ್ಲಿ 5 ಕಡೆ ಚೆಕ್‍ ಪೋಸ್ಟ್‍ಗಳನ್ನು ಹಾಕಿ ಯಾರಿಗೂ ಸಹ ಗ್ರಾಮದ ಒಳಗೆ ಬರುವುದಕ್ಕೆ ಹೋಗುವುದಕ್ಕೆ ನಿಷೇಧ ಹೇರಲಾಗಿದೆ.

ಸೋಂಕಿತರ ಕುಟುಂಬಸ್ಥರು, ಹೋಮ್ ಕ್ವಾರೈಂಟೈನ್‍ನಲ್ಲಿರುವ ಕುಟುಂಬಗಳಿಗೆ ಆಹಾರ, ನೀರು, ಔಷಧಿ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣನವರ್ ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಡಿವೈಎಸ್ಪಿ ಎನ್.ಬಿ. ಸಕ್ರಿ, ಡಿಎಚ್‍ಒ ಡಾ. ಮಂಜುಳಾದೇವಿ ಸೇರಿದಂತೆ ವಿವಿಧ ಇಲಾಖೆಯ ಅಕಾರಿಗಳು ಸಾಥ್ ನೀಡಿದರು.

Facebook Comments