“ಅನುಮತಿ ಪಡೆಯದೇ ಬಡಾವಣೆಗಳನ್ನು ನಿರ್ಮಿಸಿದರೆ ಕ್ರಿಮಿನಲ್ ಕೇಸ್”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ. 24- ರಾಜ್ಯದಲ್ಲಿ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಬಡಾವಣೆಗಳನ್ನು ನಿರ್ಮಿಸಿದರೆ ಅವುಗಳನ್ನು ರದ್ದುಪಡಿಸಿ, ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಅಮೃತದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಇಲಾಖೆ ವತಿಯಿಂದ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯದ ಯಾವ ಭಾಗಗಳಲ್ಲಿ ಅನಕೃತವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬ ಬಗ್ಗೆ ಪಟ್ಟಿ ತಯಾರಿಸಲು ಅಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಒಂದು ವೇಳೆ ಸ್ಥಳೀಯ ಪ್ರಾಕಾರ ಇಲ್ಲವೇ ಯೋಜನಾ ಪ್ರಾಕಾರದ ಅನುಮತಿ ಪಡೆಯದೇ ನಿರ್ಮಿಸಿದ್ದರೆ, ಅವುಗಳನ್ನು ರದ್ದುಪಡಿಸಲಾಗುವುದು. ಒಂದು ವೇಳೆ ಅಧಿಕಾರಿಗಳು ಭಾಗಿಯಾಗಿದ್ದರೆ, ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಇಲಾಖೆಯ ಸಚಿವನಾದ ಮೇಲೆ ಅಧಿಕಾರಿಗಳ ಸಭೆ ನಡೆಸಿ ಅನಕೃತ ಬಡಾವಣೆಗಳಿಗೆ ಅನುಮತಿ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಯಾವುದೇ ಒತ್ತಡ ಮುಲಾಜಿಗೆ ಒಳಗಾಗದಂತೆ ನಿದೇರ್ಶಿಸಿದ್ದೇನೆ. ಇಷ್ಟಾಗಿಯೂ ಅಕಾರಿಗಳು ಭಾಗಿಯಾದರೆ ಶಿಸ್ತು ಕ್ರÀಮ ಖಚಿತ ಎಂದರು.

ಅನಧಿಕೃತ ಬಡಾವಣೆಗಳಿಗೆ ಮೂಲಸೌಕರ್ಯಗಳಾದ ವಿದ್ಯುತ್, ನೀರು, ರಸ್ತೆ, ಚರಂಡಿ ಸೇರಿದಂತೆ ಯಾವುದೇ ರೀತಿಯ ಕನಿಷ್ಠ ಸೌಲಭ್ಯ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಬಡಾಬವಣೆ ನಿರ್ಮಿಸಿದ್ದಾರೆ. ಹೇಳುವವರು ಇಲ್ಲ. ಕೇಳುವವರೂ ಇಲ್ಲ. ನಿವೇಶನ ನೀಡುವುದಾಗಿ ಹಣ ಪಡೆಯುತ್ತಾರೆ.

ಕನಿಷ್ಠ ಮೂಲಸೌಲಭ್ಯ ಕಲ್ಪಿಸುವುದಿಲ್ಲ. ಕೊನೆಗೆ ಒಂದು ದಿನ ಹಣದೊಂದಿಗೆ ಪರಾರಿಯಾಗುತ್ತಾರೆ. ಕೃಷಿ ಜಮೀನನಲ್ಲೇ ಬಡಾವಣೆ ಮಾಡಿದ್ದಾರೆ. ಎಷ್ಟು ಜನರ ಮೇಲೆ ಕ್ರ ಕೈಗೊಂಡಿದ್ದೀರಿ. ಪ್ರತಿ ಅವೇಶನದಲ್ಲೂ ಇದೇ ಉತ್ತರ ಕೊಡುತ್ತೀರಿ ಎಂದು ಆಕ್ರೋಶಶ ವ್ಯಕ್ತಪಡಿಸಿದರು. ಆಗ ನಿರ್ದಿಷ್ಟ ಪ್ರಕರಣಗಳಿದ್ದರೆ, ಗಮನ್ಕಕೆ ತಂದರೆ ಕಾನೂನು ಕ್ರಮ ಜರುಗಿಸುವ ಭರವಸೆಯನ್ನು ಸಚಿವರು ನೀಡಿದರು.

Facebook Comments

Sri Raghav

Admin