ಹಬ್ಬದ ಊಟಕ್ಕೆ ತಪ್ಪುಅರ್ಥ ಬೇಡ : ಬೈರತಿ ಬಸವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪುರ, ಅ.10- ದಸರ ಹಬ್ಬದ ಪ್ರಯುಕ್ತ ಕೆ.ಆರ್.ಪುರ ಕ್ಷೇತ್ರದ ಜನತೆಗೆ ಊಟ ಹಾಕಿಸಿದ್ದೇ ಹೊರತು ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಶಾಸಕ ಬೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ದಸರಾ ಹಬ್ಬಕ್ಕೆ ಕೆ.ಆರ್.ಪುರ ಕ್ಷೇತ್ರದ ಜನತೆಗೆ ಊಟ ಹಾಕಿಸುತ್ತಾ ಬಂದಿದ್ದೇನೆ.

ಕಳೆದ ವರ್ಷ ನಾನು ಊರಿನಲ್ಲಿ ಇಲ್ಲದೇ ಇದ್ದಿದ್ದರಿಂದ ಊಟ ಹಾಕಿಸುವುದಕ್ಕೆ ಆಗಲಿಲ್ಲ. ಇದನ್ನು ನಾನು ಆಗದವರು ಚುನಾವಣೆಗೋಸ್ಕರ ಊಟ ಹಾಕಿಸುತ್ತಿದ್ದಾರೆ ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಕೆ.ಆರ್.ಪುರ ಕ್ಷೇತ್ರದಲ್ಲಿ ನಾನು ಶಾಸಕನಾದಾಗಿನಿಂದ ಹಲವು ಅಭಿವೃದ್ಧಿ ಕಾರ್ಯಗಳಲ್ಲದೆ ವೈಯಕ್ತಿಕವಾಗಿ ದೇವಾಲಯಗಳ ಅಭಿವೃದ್ಧಿ, ಕಷ್ಟದಲ್ಲಿರುವ ಬಡವರ ಅಭಿವೃದ್ಧಿಗೆ ಸದಾ ಕೈ ಜೋಡಿಸಿದ್ದೇನೆ ಎಂದು ಹೇಳಿದರು.

ನನ್ನ ವಿರುದ್ಧ ಮಾತನಾಡು ವವರು ಬಡವರಿಗೆ ನಾನು ಮಾಡುವ ಸಹಾಯದಲ್ಲಿ ಸ್ವಲ್ಪ ಮಟ್ಟಿಗಾದರೂ ಮಾಡಿ ತೋರಿಸಲಿ. ಅದನ್ನು ಬಿಟ್ಟು ಬಡವರ ಏಳ್ಗೆಗಾಗಿ ದುಡಿಯುತ್ತಿರುವವರ ವಿರುದ್ಧ ಸುಳ್ಳು ಆರೋಪಗಳು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ದಸರ ಹಬ್ಬದ ಪ್ರಯುಕ್ತ ಕಣ್ಣೂರು ಬಳಿಯ ಕನಕ ಶ್ರೀ ಬಡಾವಣೆಯಲ್ಲಿ ಸುಮಾರು 30 ಸಾವಿರ ಜನಕ್ಕೆ ಸಸ್ಯಹಾರಿ ಹಾಗೂ ಮಾಂಸಹಾರಿ ಊಟವನ್ನು ಏರ್ಪಡಿಸಿದ್ದು ನಿರೀಕ್ಷೆಗೂ ಮೀರಿ ನನ್ನ ಮತದಾರರು ಹಿತೈಶಿಗಳು ಆಗಮಿಸಿ ಸಂತಸ ವ್ಯಕ್ತಪಡಿಸಿ ಹೋಗಿದ್ದಾರೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ನನ್ನ ವಿರುದ್ಧ ಯಾರೇ ನಿಂತು ಕೊಳ್ಳಲಿ ತಲೆ ಕೆಡಿಸಿಕೊಳ್ಳೋದಿಲ್ಲ, ನನಗೆ ಜನರ ಆಶೀರ್ವಾದ ಇದೆ ಎಂದರು.

Facebook Comments