ಬಿಎಸ್‌ವೈ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಿಂಹಪಾಲು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.6- ಇಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಕ್ಕಲಿಗ ಸಮುದಾಯದ ಶಾಸಕರಿಗೆ ಸಿಂಹಪಾಲು ದೊರೆತಿದೆ. ಆದರೂ ಸಂಪುಟದಲ್ಲಿ ಲಿಂಗಾಯಿತರ ಪ್ರಾಬಲ್ಯವೇ ಹೆಚ್ಚಾಗಿದೆ.  ಇಂದು ಸಂಪುಟಕ್ಕೆ ಸೇರಿದವರ ಪೈಕಿ ಎಸ್.ಟಿ.ಸೋಮಶೇಖರ್, ಸುಧಾಕರ್, ಗೋಪಾಲಯ್ಯ, ನಾರಾಯಣಗೌಡ ಅವರುಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ರಮೇಶ್ ಜಾರಕಿಹೊಳಿ ನಾಯಕ ಸಮುದಾಯ, ಭೈರತಿ ಬಸವರಾಜ್ ಕುರುಬ ಸಮುದಾಯ, ಆನಂದ್ ಸಿಂಗ್ ರಜಪೂತ್ ಸಮುದಾಯ, ಶಿವರಾಮ್ ಹೆಬ್ಬಾರ್ ಬ್ರಾಹ್ಮಣ ಸಮುದಾಯ, ಶ್ರೀಮಂತಪಾಟೀಲ್ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ.  ಒಟ್ಟಾರೆ ಸಂಪುಟದಲ್ಲಿ ಜಾತಿವಾರು ಸಿಕ್ಕ ಪ್ರಾತಿನಿಧ್ಯದ ವಿವರ ಕೆಳಗಿನಂತಿದೆ.

ಲಿಂಗಾಯಿತ ಸಮುದಾಯದಿಂದ (9 ಮಂದಿ) ಯಡಿಯೂರಪ್ಪ, ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್. ಒಕ್ಕಲಿಗ ಸಮುದಾಯದಿಂದ(ಏಳು ಮಂದಿ) ಡಾ.ಅಶ್ವಥ್ ನಾರಾಯಣ, ಆರ್.ಅಶೋಕ್, ಸಿ.ಟಿ.ರವಿ, ಎಸ್.ಟಿ.ಸೋಮಶೇಖರ್, ಸುಧಾಕರ್, ಕೆ.ಗೋಪಾಲಯ್ಯ, ನಾರಾಯಣಗೌಡ.

ಕುರುಬ ಸಮುದಾಯದಿಂದ( ಇಬ್ಬರು) ಕೆ.ಎಸ್.ಈಶ್ವರಪ್ಪ , ಭೈರತಿ ಬಸವರಾಜ್. ಬ್ರಾಹ್ಮಣ ಸಮುದಾಯದಿಂದ( ಇಬ್ಬರು) ಸುರೇಶ್‍ಕುಮಾರ್, ಶಿವರಾಮ್ ಹೆಬ್ಬಾರ್.
ವಾಲ್ಮೀಕಿ ಸಮುದಾಯದಿಂದ( ಇಬ್ಬರು) ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಪರಿಶಿಷ್ಟ ಜಾತಿಯಲ್ಲಿ(ಮೂವರು) ಎಡಗೈ ಸಮುದಾಯದಿಂದ ಗೋವಿಂದ ಕಾರಜೋಳ, ಬಲಗೈ ಸಮುದಾಯದಿಂದ ಎಚ್.ನಾಗೇಶ್, ಲಂಬಾಣಿ ಸಮುದಾಯದಿಂದ ಪ್ರಭು ಚವ್ಹಾಣ್.  ಬಿಲ್ಲವ ಸಮುದಾಯದಿಂದ ಕೋಟಾ ಶ್ರೀನಿವಾಸ ಪೂಜಾರಿ. ಜೈನ ಸಮುದಾಯದಿಂದ ಶ್ರೀಮಂತ ಪಾಟೀಲ್, ರಜಪೂತ್ ಸಮುದಾಯದಿಂದ ಆನಂದ್ ಸಿಂಗ್ ಸಚಿವರಾಗಿದ್ದಾರೆ.

Facebook Comments