ಅನಾಹುತಕಾರಿ ತಿರುವು ಪಡೆಯುತ್ತಿರುವ ಬಿಜೆಪಿಯಲ್ಲಿನ ಬೆಳವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29- ಪದೇ ಪದೇ ವಿಳಂಬವಾಗುತ್ತಿರುವ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಗೆ ವರಿಷ್ಟರಿಂದ ಸಿಗದ ಅನುಮತಿ, ನಾಯಕತ್ವ ಗೊಂದಲ, ನಿಗಮಮಂಡಳಿ ನೇಮಕಾತಿಯಲ್ಲಿ ಕಡೆಗಣನೆ ಸೇರಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸದ್ಯ ನಡೆಯು ತ್ತಿರುವ ಬೆಳವಣಿಗೆ ಯಾವುದೇ ಹಂತಕ್ಕೆ ತಲುಪಿದರೂ ಅಚ್ಚರಿ ಇಲ್ಲ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾಯಿಸಿಯೇ ಸಿದ್ದ ಎಂಬ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಂಡಿರುವುದರಿಂದ ಬಂಡಾಯ ಕಾವು ಏರತೊಡಗಿದೆ. ಆದರೆ ಇದು ಸುಲಭದ ಮಾತೇನಲ್ಲ. ಹಾಗೇನಾದರೂ ನಿರ್ಧಾರಕ್ಕೆ ಬಂದಲ್ಲಿ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.

ಕುರ್ಚಿ ಕಸಿದುಕೊಂಡ ಹೈಕಮಾಂಡ್‍ಗೆ ತಕ್ಕ ಉತ್ತರ ಕೊಡಲು ಬಿಎಸ್ ಯಡಿಯೂರಪ್ಪ ಕೂಡಾ ತಯಾರಿ ನಡೆಸುತ್ತಿದ್ದಾರೆ. ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿ ಹೈಕಮಾಂಡ್ ತೊಡಗಿಕೊಂಡಿದ್ದು ಇದಕ್ಕೆ ಸಡ್ಡು ಹೊಡಿಯಲು ಯಡಿಯೂರಪ್ಪ ಬಣವೂ ಸಜ್ಜಾಗಿದೆ.

ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ, ನಾಯಕತ್ವ ಬದಲಾವಣೆ, ನಿಗಮ ಮಂಡಳಿಗಳ ನೇಮಕಾತಿ, ವೀರಶೈವ ಲಿಂಗಾಯಿತ ಒಬಿಸಿ ಮೀಸಲಾತಿ, ಬಣ ರಾಜಕೀಯ, ಕೆಲ ಸಚಿವರ ಅನಗತ್ಯ ದೆಹಲಿ ಯಾತ್ರೆ ಎಲ್ಲ ವಿಷಯಗಳಿಂದ ಪಕ್ಷದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ಈ ನಡುವೆ ಸಂಪುಟ ವಿಸ್ತರಣೆಯಲ್ಲಿನ ವಿಳಂಬವನ್ನು ವಿರೋಸಿ ಅಸಮಾದಾನಗೊಂಡಿರುವ ಬಿಜೆಪಿಯ ಮಿತ್ರ ಮಂಡಲಿ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಂಡಾಯ ನಾಯಕರ ನಾಯಕತ್ವ ವಹಿಸಿಕೊಂಡಿರುವಂತೆ ಬಿಂಬಿಸಿಕೊಳ್ಳುತ್ತಿರುವ ಸಚಿವ ರಮೇಶ್ ಜಾರಕಿಹೊಳಿಯವರು ಕೇಂದ್ರೀಯ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಮೇಲೆ ಮುನಿಸಿಕೊಂಡಿರುವ ಕೆಲ ಸಚಿವರು ಕೂಡ ಡಿಸೆಂಬರ್ 5ರಂದು ಕೇಂದ್ರ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಕಳೆದ ವರ್ಷದ ಬಿಜೆಪಿ ಅಕಾರಕ್ಕೆ ಬರಲು ಸಹಾಯ ಮಾಡಿದ್ದ ಉಳಿದ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಹಾಲಿ ಸಚಿವರು ಆಗ್ರಹಿಸುತ್ತಿದ್ದಾರೆ. ಸಂಪುಟ ವಿಸ್ತರಣೆ ವಿಳಂಬ ಕುರಿತು ಹಾಗೂ ಬಿಜೆಪಿ ಅಕಾರಕ್ಕೆ ಬರಲು ಕಾರಣರಾದ ನಾಯಕರಿಗೆ ಸಚಿವ ಕೊಡಿಸಲು ಶತಃ ಪ್ರಯತ್ನ ನಡೆಸಲು ನಿರ್ಧರಿಸಿದ್ದರೆಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ನಾಯಕರೊಬ್ಬರ ಹೇಳಿಕೆಯ ಪ್ರಕಾ, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ಇದೊಂದು ಅನೌಪಚಾರಿಕ ಸಭೆಯಾಗಿತ್ತು. ಮುಖ್ಯಮಂತ್ರಿಗಳು, ಪಕ್ಷದ ವಿರುದ್ಧವಾಗಿ ಸಭೆಯನ್ನು ನಡೆಸಲಾಗಿರಲಿಲ್ಲ ಎನ್ನಲಾಗಿದೆ.

ಸಭೆಯಲ್ಲಿ ಸಚಿವರಾದ ಬಿಸಿ ಪಾಟೀಲï, ಎಸ್.ಟಿ.ಸೋಮಶೇಖರ್, ಶಿವರಾಮï ಹೆಬ್ಬಾರ್, ಬೈರತಿ ಬಸವರಾಜ್ ಮತ್ತು ಇತರೆ ನಾಯಕರು ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದ ನಾಯಕರೆಲ್ಲರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದ ಯಡಿಯೂರಪ್ಪ ಅವರು ಇದೀಗ ತಮ್ಮ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ನಾಯಕರು ಇದೇ ವೇಳೆ ಆಗ್ರಹಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಉಪಚುನಾವಣೆ ಅಂತ್ಯಗೊಂಡ ಬಳಿಕ 10 ಮಂದಿಯನ್ನು ಸಚಿವರನ್ನಾಗಿ ಮಾಡಲಾಗಿತ್ತು. ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಮುನಿರತ್ನ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಸಿದ್ದು, ಮುನಿರತ್ನ, ಎಂಟಿಬಿ ನಾಗರಾಜ್, ಆರ್.ಶಂಕರ್, ವಿಶ್ವನಾಥ್ ಅವರು ಸಚಿವಾಕಾಂಕ್ಷಿಗಳಾಗಿದ್ದಾರೆ.

ಒಟ್ಟಿನಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿ ಎಲ್ಲಿಗೂ ತಲುಪಬಹುದು ಎಂಬ ಸ್ಥಿತಿಯಲ್ಲಿದೆ. ಪಟ್ಟ ಉಳಿಸಿಕೊಳ್ಳಲು ಬಿಎಸ್‍ವೈ ಪ್ರಯತ್ನ ಪಡುತ್ತಿದ್ದರೆ, ಕುರ್ಚಿ ಬೇರೆಯವರಿಗೆ ನೀಡಲು ಬಿಜೆಪಿ ಹೈಕಮಾಂಡ್ ತಂತ್ರ ಹೂಡುತ್ತಿದೆ.

Facebook Comments

Sri Raghav

Admin