ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರಣಭೀಕರ ಕಾಡ್ಗಿಚ್ಚು..!

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾನ್ ಫ್ರಾನ್ಸಿಸ್ಕೋ, ಆ.24- ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರಣಭೀಕರ ಕಾಡ್ಗಿಚ್ಚಿನ ರೌದ್ರಾವತಾರದಿಂದಾಗಿ ಸಾವು-ನೋವು ಸಂಭವಿಸಿದ್ದು, ನೂರಾರು ಮನೆಗಳು ಸುಟ್ಟು ಬೂದಿಯಾಗಿವೆ. ಅರಣ್ಯ ಬೆಂಕಿಯ ಕೆನ್ನಾಲಿಗೆಗಳು 10 ಲಕ್ಷಕ್ಕೂ ಹೆಚ್ಚು ಎಕರೆ ಕಾನನವನ್ನು ಆಪೋಶನ ತೆಗೆದುಕೊಂಡಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬೆಂಕಿಯ ಜ್ವಾಲೆಗಳನ್ನು ನಂದಿಸಲು ಹರ ಸಾಹಸ ಮುಂದುವರಿಸಿರುವ ರಕ್ಷಣಾ ಕಾರ್ಯಕರ್ತರಿಗೆ ಪ್ರತಿಕೂಲ ಹವಾಮಾನ ಮತ್ತು ಬಿರುಗಾಳಿ ಅಡ್ಡಿಯಾಗಿದೆ.

ಉತ್ತರ ಕ್ಯಾಲಿಫೆÇೀರ್ನಿಯಾದಲ್ಲಿ ಕಳೆದ ಒಂದು ವಾರದಿಂದ ಧಗಧಗಿಸುತ್ತಿರುವ ಅರಣ್ಯ ಬೆಂಕಿಯಿಂದ ಸಾವು-ನೋವು ಸಂಭವಿಸಿದೆ. ಅನೇಕರು ತೀವ್ರ ಗಾಯಗೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಪ್ರಾಣಿ ಪಕ್ಷಿಗಳು ಬೆಂದು ಹೋಗಿವೆ. ನೂರಾರು ಮನೆಗಳು ನಾಶವಾಗಿದ್ದು, ಲಕ್ಷಾಂತರ ಜನರ ಸುರಕ್ಷಿತ ಸ್ಥಳಗಳತ್ತ ಪಲಾಯನ ಮಾಡಿದ್ದಾರೆ.

ಅಗ್ನಿ ಶಾಮಕ ಪಡೆ ಸೇರಿದಂತೆ ಅನೇಕ ರಕ್ಷಣಾ ಕಾರ್ಯಕರ್ತರು ಕಾಡ್ಗಿಚ್ಚಿನ ಜ್ವಾಲೆಗಳನ್ನು ತಣಿಸಲು ಎಂಟು ದಿನಗಳಿಂದ ಹರಸಾಹಸ ಮಾಡುತ್ತಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್‍ಗಳು ಪ್ರತಿಕೂಲ ಹವಾಮಾನದಿಂದ ಭೂ ಸ್ಪರ್ಶ ಮಾಡಿವೆ.

ಗಾಳಿಯ ದಿಕ್ಕು ಬದಲಾಗುತ್ತಿದ್ದು, ಹೊಸ ಪ್ರದೇಶಗಳಿಗೆ ಬೆಂಕಿಯ ಕೆನ್ನಾಲಿಗೆ ಹಬ್ಬುವ ಆತಂಕವಿದೆ. ಕ್ಯಾಲಿ ಫೋರ್ನಿಯಾ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15ರಿಂದ 12,000ಕ್ಕೂ ಹೆಚ್ಚು ಮಿಂಚುಗಳು ಆಗಸದಲ್ಲಿ ಭೋರ್ಗರೆದಿದ್ದು, ಸಣ್ಣಪುಟ್ಟ ಕಾಡ್ಗಿಚ್ಚು ಸೇರಿದಂತೆ 500ಕ್ಕೂ ಬೆಂಕಿಗಳು ಕಾಣಿಸಿಕೊಂಡು ಆತಂಕಕಾರಿ ಮಟ್ಟದಲ್ಲಿ ವಿಸ್ತರಿಸುತ್ತಿದೆ.

 

Facebook Comments

Sri Raghav

Admin