ಕೊರೋನಾ ಕುರಿತು ಮತ್ತೊಂದು ಶಾಕಿಂಗ್ ನ್ಯೂಸ್..! ಭಯಾನಕ ಸತ್ಯ ಬಿಚ್ಚಿಟ್ಟ ವಿಜ್ಞಾನಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಜು.6- ವಿಶ್ವಾದ್ಯಂತ 1.15 ಕೋಟಿಗೂ ಅಧಿಕ ಜನರಿಗೆ ಸೋಂಕು ಮತ್ತು 5.37 ಲಕ್ಷ ಮಂದಿ ಸಾವಿಗೆ ಕಾರಣವಾಗಿರುವ ಕಿಲ್ಲರ್ ಕೋವಿಡ್-19 ವೈರಸ್ ಸಾಂಕ್ರಾಮಿಕ ರೋಗ ಗಾಳಿಯಿಂದಲೂ ಹರಡುತ್ತದೆ ಎಂಬ ಆತಂಕಕಾರಿ ಸಂಗತಿ ಜಗತ್ತಿನ ಜನರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.

32 ದೇಶಗಳ 239 ವಿಜ್ಞಾನಿಗಳು ಕೋವಿಡ್ ವೈರಸ್ ಗಾಳಿಯಿಂದಲೂ ಹಬ್ಬಬಲ್ಲದು ಎಂಬ ಆಘಾತಕಾರಿ ಸಂಗತಿಯನ್ನು ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ.

ಈ ವಿಜ್ಞಾನಿಗಳ ಹೇಳಿಕೆಗಳನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಪ್ರಮುಖವಾಗಿ ವರದಿಯಾಗಿದೆ. ಕೋವಿಡ್-19 ವೈರಸ್‍ನಲ್ಲಿರುವ ಅತ್ಯಂತ ಸೂಕ್ಷ್ಮ ಕಣಗಳು ಗಾಳಿಯ ಮೂಲಕವೂ ರೋಗವನ್ನು ಹಬ್ಬಿಸುತ್ತವೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಅಲ್ಲದೆ, ಕೊರೊನಾ ವೈರಸ್ ವಿಷಯದಲ್ಲಿ ವಿಶ್ವಸಂಸ್ಥೆ ಈಗ ಹೊರಡಿಸಿರುವ ಮಾರ್ಗಸೂಚಿಗಳನ್ನು ತಕ್ಷಣ ಮಾರ್ಪಾಡು ಮಾಡಬೇಕು ಎಂದು ವಿಜ್ಞಾನಿಗಳ ಸಮುದಾಯ ಆಗ್ರಹಿಸಿದೆ.

ಈವರೆಗೆ ಕೊರೊನಾ ಮನುಷ್ಯನಿಂದ ಮನುಷ್ಯನಿಗೆ (ಸೀನುವಿಕೆ, ಕೆಮ್ಮುವಿಕೆ, ಮಾತನಾಡುವಿಕೆ, ಸ್ಪರ್ಶ) ಮೊದಲಾದ ಕಾರಣಗಳಿಂದ ಹಬ್ಬುತ್ತದೆ ಎಂದು ನಂಬಲಾಗಿತ್ತು. ಈಗ 239 ವಿಜ್ಞಾನಿಗಳು ಗಾಳಿಯಿಂದಲೂ ಕಿಲ್ಲರ್ ವೈರಸ್ ಹಬ್ಬುತ್ತದೆ ಎಂಬ ಬಗ್ಗೆ ನೀಡಿರುವ ಹೇಳಿಕೆ ವಿಶ್ವದ ಜನರನ್ನು ಚಿಂತಾಕ್ರಾಂತಗೊಳಿಸಿದೆ.

ವಿಜ್ಞಾನಿಗಳ ಹೇಳಿಕೆ ಬಗ್ಗೆ ತಕ್ಷಣಕ್ಕೆ ವಿಶ್ವಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ ಗಾಳಿಯಿಂದ ವೈರಾಣು ಹಬ್ಬುವ ಸಾಧ್ಯತೆ ಕಡಿಮೆ ಎಂದು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಇಂದು ಸಂಜೆ ಅಥವಾ ನಾಳೆ ಅಧಿಕೃತ ಮಾಹಿತಿ ನೀಡಲಿದೆ.

Facebook Comments