ಮಧುಮೇಹ ರೋಗಿಗಳಿಗಾಗಿಯೇ ಅನ್ನ ತಯಾರಿಸುವ ವಿಧಾನ ಹೇಗೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Rice--01

ಒಮ್ಮೆ ಮಧುಮೇಹ ಬಂತೆಂದರೆ ಅವರ ಜೀವನ ಒಂದು ರೀತಿಯ ನರಕದಂತಾಗಿಬಿಡುತ್ತೆ, ಏನನ್ನು ತಿನ್ನಬೇಕೆಂದರೂ ನೂರು ಬಾರಿ ಯೋಚಿಸಬೇಕಾಗುತ್ತೆ. ಅದರಲ್ಲೂ ಅನ್ನವನ್ನು ತಿನ್ನುವ ಆಸೆಯನ್ನು ತಡೆಯಲು ಸಾಧ್ಯವೇ ಇಲ್ಲ. ಆದರೆ ಅನ್ನ ತಿಂದರೆ ಮಧುಮೇಹಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತೆ. ಆದರೆ ಆ ಅನ್ನವನ್ನು ಹೇಗೆ ತಯಾರಿಸಬೇಕು, ಎಷ್ಟು ಹೊತ್ತು ಬೇಯಿಸಬೇಕು? ಕುಕ್ಕರ್ ನಲ್ಲಿ ಬೇಯಿಸಬೇಕೇ? ಬೇಯಿಸಬಾರದೇ? ಎಂಬಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Rice--03
# ಮಧುಮೇಹ ರೋಗವುಳ್ಳವರಿಗೆ ಅನ್ನವನ್ನು ತಯಾರಿಸುವ ವಿಧಾನ ಏನು..?
ನಾಗರಿಕತೆ ಬೆಳೆದಂತೆ ನಮ್ಮ ಅಡಿಗೆ ಪದ್ಧತಿಯಲ್ಲಿ ಬಹಳ ಬದಲಾವಣೆಗಳಾಗಿವೆ. ಇಂದು ಅನ್ನವನ್ನು ತಯಾರಿಸಲು, ಕುಕ್ಕರ್ ರೇಂಜ್ ಮುಂತಾದ ಆಧುನಿಕ ಉಪಕರಣಗಳನ್ನು ಉಪಯೋಗಿಸುವುದು ಸಾಮಾನ್ಯವಾಗಿದೆ. ಆದರೆ ಈ ರೀತಿ ಸುಧಾರಿತ ಆಧುನಿಕ ಉಪಕರಣದಿಂದ ತಯಾರಿದ ಅನ್ನ ಮಧುಮೇರೋಗಿಗಳಿಗೆ ಅಷ್ಟೊಂದು ಹಿತವಾದುದಲ್ಲ. ಅದಕ್ಕೆ ಬದಲಾಗಿ ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನದಿಂದ ತಯಾರಿಸುತ್ತಿದ್ದ ಅನ್ನ ಬಹಳ ಉತ್ತಮ. ಆದರೆ ಇಂದಿನ ನಾಗರಿಕ ಸಮಾಜದ ಹೆಚ್ಚು ಜನ ಗೃಹಣಿಯರಿಗೆ ನಮ್ಮ ಪಾರಂಪರಿಕ ಪದ್ಧತಿಯಂತೆ ಅನ್ನವನ್ನು ಮಾಡುವ ವಿಧಾನ ಗೊತ್ತೇ ಇಲ್ಲ ಎಂಬುದು ಶೋಚನೀಯ.

Rice--02

ಅನ್ನವನ್ನು ಮಾಡಲು ಉಪಯೋಗಿಸುವ ಅಕ್ಕಿಯಲ್ಲಿ ನೀರಿನಲ್ಲಿ 15-20 ನಿಮಿಷ ನೆನೆಯಲು ಇಡಬೇಕು. ಒಲೆಯ ಮೇಲೆ ಅನ್ನ ಮಾಡಲು ಬೇಕಾದ ನೀರನ್ನು ಕಾಯಲು ನೀಡಬೇಕು. ಈ ನೀರಿನ ಪ್ರಮಾಣ ಅಕ್ಕಿಯ ಪ್ರಮಾಣದ 8ರಷ್ಟು ಹೆಚ್ಚು ಇರಬೇಕು. ನೀರು ಚೆನ್ನಾಗಿ ಕಾಯ್ದು ಮರಳಲು ಪ್ರಾರಂಭಿಸಿದಾಗ, ನೆನೆಯಲು ಇಟ್ಟಿರುವ ಅಕ್ಕಿಯನ್ನು ಚೆನ್ನಾಗಿ ಕಾಯ್ದು ಮರಳಲು ಪ್ರಾರಂಭಿಸಿದಾಗ, ನೆನೆಯಲು ಇಟ್ಟಿರುವ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನ್ನೇಲ್ಲಾ ಬಸಿದು, ಮರಳುತ್ತಿರುವ ನೀರಿನಲ್ಲಿ ಹಾಕಿ, ಮಧ್ಯಮವಾದ ಉರಿಯಿಂದ ಬೇಯಿಸಬೇಕು. ಬೇಯುವಗ ಪಾತ್ರೆಯ ಬಾಯನ್ನು ಮುಚ್ಚುವುದು ಹಾಗೂ ಅಕ್ಕಿ ತಳಕಟ್ಟದ ಹಾಗೆ ಆಗಾಗ ದೌಟಿನಿಂದ ತಿರುವುತ್ತಿರಬೇಕು. ಅಕ್ಕಿ ಹದವಾಗಿ ಬೆಂದು ಮೆತ್ತನಾದಾಗ ಅದರಲ್ಲಿರುವ ಗಂಜಿ(ನೀರನ್ನು)ಯನ್ನು ಬಸಿದು ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಿಂದ ಬೇಯಿಸಬೇಕು. ಇದರಿಂದ ಅನ್ನ ಚೆನ್ನಾಗಿ ಅರಳಿ, ಮುದ್ದೆಯಾಗದೆ, ಹುಡಿ ಹುಡಿಯಾಗಿ ಸಿದ್ಧವಾಗುತ್ತದೆ. ಈ ಅನ್ನವನ್ನು ಮಧುಮೇಹ ರೋಗಿಗಳು ತಮ್ಮ ಪ್ರಮುಖ ಆಹಾರವನ್ನಾಗಿ ಊಟ ಮಾಡಬಹುದು. ಈ ರೀತಿ ಪಾರಂಪರಿಕ ವಿಧಾನದಿಂದ ತಯಾರಾಗದ ಅನ್ನದಲ್ಲಿ ಶರ್ಕರ ಪಿಷ್ಠ ಅಂಶವು ಕಡಿಮೆ ಇದ್ದು ಮಧುಮೇಹ ರೋಗಿಗಳಿಗೆ ಪಥ್ಯ ವಾಗಿರುವುದು.

Facebook Comments

Sri Raghav

Admin