ಮುಂದುವರಿದ ಟ್ರೇಡ್ ವಾರ್ ; ಅಮೆರಿಕಾ ವಿರುದ್ಧ ತಿರುಗಿ ಬಿದ್ದ ಕೆನಡಾ

ಈ ಸುದ್ದಿಯನ್ನು ಶೇರ್ ಮಾಡಿ

America-Vs-Canada-------00

ಟೊರೊಂಟೊ, ಜೂ.30-ಮುಂದುವರಿದ ವಾಣಿಜ್ಯ ಸಮರದಲ್ಲಿ ಈಗ ಕೆನಡಾ ಅಮೆರಿಕ ವಿರುದ್ಧ ತಿರುಗಿಬಿದ್ದಿದೆ. ತನ್ನ ಉಕ್ಕು ಮತ್ತು ಅಲ್ಯೂಮಿನಯಂ ಮೇಲೆ ಭಾರೀ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಿಸಿ ಮುಟ್ಟಿಸಿರುವ ಕೆನಡಾ ಕೋಟ್ಯಂತರ ಡಾಲರ್‍ಗಳ ತೆರಿಗೆ ಹೇರಿ ಪ್ರತೀಕಾರ ಘೋಷಿಸಿದೆ.

ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡಿಯಾವು ನೇತೃತ್ವದ ಸರ್ಕಾರ ನಿನ್ನೆ ರಾತ್ರಿ ಅಮೆರಿಕ ಉತ್ಪನ್ನಗಳ ಮೇಲೆ ವಿಧಿಸಬೇಕಾದ ತೆರಿಗೆಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಳೆಯಿಂದ ಇದು ಜಾರಿಗೆ ಬರಲಿದೆ. ಅಮೆರಿಕದ ಕೆಲವು ವಸ್ತುಗಳ ಮೇಲೆ ಶೇ.10 ರಿಂದ 25ರಷ್ಟು ಸುಂಕ ಹೇರಲಾಗಿದೆ.
ಅಮೆರಿಕದ ಕೆಚ್‍ಅಪ್, ಲಾನ್ ಮೋವರ್ ಮತ್ತು ಮೋಟಾರ್ ಬೋಟ್‍ಗಳೂ ಸೇರಿದಂತೆ ಒಟ್ಟು 12.6 ಶತಕೋಟಿ ರೂ. ತೆರಿಗೆ ಬರೆ ಎಳೆದಿದೆ. ಈಗಾಗಲೇ ಚೀನಾ ಮತ್ತು ಭಾರತದೊಂದಿಗೆ ವಾಣಿಜ್ಯ ಸಮರ ನಡೆಸುತ್ತಿರುವ ಟ್ರಂಪ್‍ಗೆ ಕೆನಡಾ ಮತ್ತೊಂದು ಶಾಕ್ ನೀಡಿದೆ.

Facebook Comments

Sri Raghav

Admin