16 ಲಕ್ಷ ಕೋಟಿ ಜಾಗತಿಕ ವ್ಯವಹಾರ ಮಾಡಿದ ಕೆನರಾ ಬ್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ದೇಶದ ಪ್ರತಿಷ್ಠಿತ ಕೆನರಾ ಬ್ಯಾಂಕ್ ತನ್ನ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು ಜಾಗತಿಕ ವ್ಯವಹಾರದಲ್ಲಿ 16ಲಕ್ಷ ಕೋಟಿ ವ್ಯವಹಾರ ನಡೆಸಿ ಚಕಿತಗೊಳಿಸಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ತನ್ನ ವ್ಯಾವಹಾರಿಕ ಜಾಲದಲ್ಲಿ ಏರಿಕೆ ಕಂಡಿರುವುದು ಎಲ್ಲರಲ್ಲೂ ಸಂತಸ ತಂದಿದೆ ಎಂದು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಎಲ್.ವಿ.ಪ್ರಭಾಕರ್ ಹರ್ಷ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವ್ವಳ ಬಡ್ಡಿ ಆದಾಯ ಶೇಕಡ 8. 9 ಮತ್ತು ವಾರ್ಷಿಕ ದೇಶೀಯ ವ್ಯವಹಾರ 2. 7ರಷ್ಟು ಬೆಳವಣಿಗೆ ಕಂಡಿದೆ ಎಂದು ತಿಳಿಸಿದರು . ದೇಶೀಯ ಹಾಗೂ ಜಾಗತಿಕ ವ್ಯವಹಾರದಲ್ಲೂ ಕೂಡ ಗಮನಾರ್ಹ ಸಾಧನೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.

ಗೃಹಸಾಲ ಕೈಗಾರಿಕಾ ಸಹನಾ ರಿಟೇಲ್ ಸಾಲ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳವಣಿಗೆ ಸಾಧಿಸಲಾಗಿದೆ ಎಂದು ಮುಖ್ಯ ಆಡಳಿತಾಧಿಕಾರಿ ರಾಮಚಂದ್ರನ್ ತಿಳಿಸಿದರು. ಪ್ರಮುಖವಾಗಿ ಕೃಷಿ ಕ್ಷೇತ್ರವನ್ನು ಆದ್ಯತಾ ವಲಯವನ್ನಾಗಿ ಗುರ್ತಿಸಲಾಗಿದ್ದು ದೇಶಾದ್ಯಂತ ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 1.7ಕೋಟಿಯಷ್ಟು ಪ್ರಧಾನಮಂತ್ರಿ ಜನ್‍ಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ದೇಶಕಿ ಎ.ಮಣಿ ಮೇಖಲಾ, ದೇಬಶಿಶ್ ಮುಖರ್ಜಿ, ಕಾರ್ಯಕಾರಿ ನಿರ್ದೇಶಕ ಎಂ.ವಿ.ರಾವ್ ಮತ್ತಿತರರು ಹಾಜರಿ ದ್ದರು.

Facebook Comments