3ನೇ ತ್ರೈಮಾಸಿಕದಲ್ಲಿ 318 ಕೋಟಿ ನಿವ್ವಳ ಲಾಭ ಗಳಿಸಿದ ಕೆನರಾ ಬ್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

Canara-Bank--01

ಬೆಂಗಳೂರು,ಜ.28- ಜಾಗತಿಕ ಮಟ್ಟದ ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ವಾರ್ಷಿಕ ವಹಿವಾಟಿನ ತ್ರೈಮಾಸದ ಪ್ರಗತಿಯನ್ನು ಇಂದು ಪ್ರಕಟಿಸಿದ್ದು, 318 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು, ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ ಬ್ಯಾಂಕ್‍ನ ತ್ರೈಮಾಸಿಕ ವಹಿವಾಟು ವರದಿಯನ್ನು ಪ್ರಕಟಿಸಿದ ಕಾರ್ಯ ನಿರ್ವಾಹಕ ನಿದೇಶಕರಾದ ಭಾರತಿ ಅವರು, ಒಟ್ಟಾರೆ ಜಾಗತಿಕ ವಹಿವಾಟು ಪ್ರಗತಿ ಹಂತದಲ್ಲಿದೆ.

ಸಾಲ ವಸೂಲಾತಿ ಕ್ಷೇತ್ರದಲ್ಲಿ ಹಲವು ದಿಟ್ಟ ಕ್ರಮಗಳಿಂದಾಗಿ 1990ರಿಂದ ಹಿಡಿದು ಹಳೆಯದಾದ ಬಾಕಿ ವಸೂಲಾತಿ ಮಾಡಲಾಗಿದೆ.  ಇದಲ್ಲದೆ ಎನ್‍ಪಿಎ(ನಾನ್ ಪ್ರಾಫಿಟಬಲ್ ಅಸೆಟ್ಸ್)ನಲ್ಲೂ ಇಳಿಕೆ ಕಂಡಿರುವುದು ಮತ್ತು ಪ್ರಗತಿಯ ಹಾದಿಯಲ್ಲಿ ನಾವು ಸಾಗುತ್ತಿರುವುದು ಮತ್ತಷ್ಟು ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಸದ್ಯ ಜಾರಿಗೆ ತಂದಿರುವ ರೈತರ ಸಾಲ ಮನ್ನಾ ಯೋಜನೆಯಡಿ ರೈತರಿಂದ ಬರಬೇಕಾದ ಬಾಕಿ 4 ಸಾವಿರ ಕೋಟಿಗೂ ಹೆಚ್ಚಿದೆ. ಆದರೆ ಅರ್ಹತೆ ಪ್ರಕಾರ ನಮಗೆ 1300 ಕೋಟಿ ಮಾತ್ರ ಮನ್ನಾ ಸಾಧ್ಯವಿದೆ. ಇದನ್ನು ರಾಜ್ಯ ಸರ್ಕಾರ ಭರಿಸಬೇಕಿದೆ ಎಂದರು.

ಆರ್ಥಿಕ ವರ್ಷದ ಅಂತ್ಯಕ್ಕೆ ನಾವು ನಿರೀಕ್ಷಿತ ಗುರಿ ಸಾಧಿಸುವ ಹಾದಿಯಲ್ಲಿ ಮುನ್ನುಗುತ್ತಿದ್ದೇವೆ. ಕೃಷಿ, ಮನೆ, ಕೈಗಾರಿಕೆಗಳು, ವಾಹನಗಳ ಮೇಲಿನ ಸಾಲ ನೀಡಿಕೆಯೂ ಸಹ ಹೆಚ್ಚಾಗಿದೆ. ಜಾಗತಿಕ ವಹಿವಾಟು 9.93 ಕೋಟಿ ಮುಟ್ಟಿದ್ದು ಠೇವಣಿ 5.76 ಲಕ್ಷ ಕೋಟಿ ಇದೆ . ಒಟ್ಟಾರೆ ಮುಂಗಡ 4.17 ಕೋಟಿ ದಾಖಲಾಗಿದೆ ಎಂದು ತಿಳಿಸಿದರು.

ಗ್ರಾಹಕರಿಗೂ ಕೂಡ ಉತ್ತಮವಾದ ಸೇವೆಯನ್ನು ನೀಡುತ್ತಿದ್ದೇವೆ. ಹಲವಾರು ಬದಲಾವಣೆಯ ಯೋಜನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮತ್ತೊಬ್ಬ ಕಾರ್ಯ ನಿರ್ವಾಹಕ ರಾವ್ ಕೂಡ ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ