48,194 ಕೋಟಿ ರೂ. ಲಾಭದಲ್ಲಿ ಕೆನರಾ ಬ್ಯಾಂಕ್‍..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 10-ಪ್ರತಿಷ್ಠಿತ ಕೆನರಾ ಬ್ಯಾಂಕ್ ಕಳೆದ ಆರ್ಥಿಕ ಸಾಲಿನಲ್ಲಿ ಒಟ್ಟು 48,194 ಕೋಟಿ ರೂ.ಗಳ ಲಾಭ ಗಳಿಸಿದೆ. ಇದೇ ಅವಧಿಯಲ್ಲಿ ಬ್ಯಾಂಕ್ 347 ಕೋಟಿ ರೂ.ಗಳ ನಿವ್ವಳ ವರಮಾನ ದಾಖಲಿಸಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶದ 3ನೇ ಅತಿದೊಡ್ಡ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ 31ನೇ ಮಾರ್ಚ್ 2019ಕ್ಕೆ ಕೊನೆಗೊಂಡ ವಿತ್ತೀಯ ವರ್ಷದಲ್ಲಿ 10,43,249 ಕೋಟಿ ರೂ.ಗಳ ಒಟ್ಟು ವಹಿವಾಟು ನಡೆಸಿದೆ. ಹಿಂದಿನ ಹಣಕಾಸು ಸಾಲಿಗೆ ಹೋಲಿಸಿದಲ್ಲಿ ಶೇ.12.71ರಷ್ಟು ವೃದ್ದಿ ಸಾಧಿಸಿದೆ.

ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ನಾರಾಯಣ ಸುದ್ದಿಗೋಷ್ಠಿಯಲ್ಲಿ ಇಂದು ಆರ್ಥಿಕ ಸಾಧನೆಗಳ ವಿವರಗಳನ್ನು ಒದಗಿಸಿದರು.
ಬ್ಯಾಂಕ್ 4,44,218 ಕೋಟ ರೂ.ಗಳ ಮುಂಗಡ ನೀಡಿದ್ದು, ಶೇ.10.62ರಷ್ಟು ಪ್ರಗತಿ ಸಾಧಿಸಿದೆ. ವಸೂಲಾಗದ ಸಾಲ (ಎನ್‍ಪಿಎ) ಒಟ್ಟು ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಎಂದು ಅವರು ತಿಳಿಸಿದರು.

ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕುರಿತು ಕೆನರಾ ಬ್ಯಾಂಕ್ ಮುಂದೆ ಇಂಥ ಯಾವುಧೆ ಪ್ರಸ್ತಾಪ ಇಲ್ಲ. ಆದಾಗ್ಯೂ ಭವಿಷ್ಯದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ವಿವೇಚನೆ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಶಂಕರ್ ನಾರಾಯಣ್ ಹೇಳಿದರು. ಕೆನರಾ ಬ್ಯಾಂಕ್ ಪ್ರಸ್ತುತ ದೇಶಾದ್ಯಂತ 6,400 ಶಾಖೆಗಳನ್ನು ಹೊಂದಿದ್ದು, 59,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin