ಭಾರತದಲ್ಲಿ ಈ ವರ್ಷ 13.9 ಲಕ್ಷ ಕ್ಯಾನ್ಸರ್ ಕೇಸ್ ದಾಖಲು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.19-ಭಾರತದಲ್ಲಿ ಕ್ಯಾನ್ಸರ್ ಕೇಸ್‍ಗಳು ಹೆಚ್ಚಾಗುತ್ತಿದ್ದು, ಈ ವರ್ಷದೊಳಗೆ 13.9 ಲಕ್ಷ ಅರ್ಬುದ ರೋಗ ಪ್ರಕರಣಗಳು ದಾಖಲಾಗುತ್ತವೆ ಎಂದು ಅಂದಾಜು ಮಾಡಲಾಗಿದೆ.

2025ರ ವೇಳೆಗೆ ಈ ಪ್ರಮಾಣ 15.7 ಲಕ್ಷಕ್ಕೇರಲಿದೆ ಎಂದು ವರದಿಯೊಂದು ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಬೆಂಗಳೂರು ಮೂಲದ ನ್ಯಾಷನಲ್ ಸೆಂಟರ್ ಫಾರ್ ಡೀಸಿಸ್ ಇನ್‍ಫಮ್ರ್ಯಾಟಿಕ್ಸ್ ಅಂಡ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಈ ವರ್ಷ ಭಾರತದಲ್ಲಿ 6,79,421 ಪುರುಷರು ಮತ್ತು 7,12,758 ಮಹಿಳೆಯರಿಗೆ ಕ್ಯಾನ್ಸರ್ ಪ್ರಕರಣವನ್ನು ಅಂದಾಜು ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಅಂದರೆ 2025ರ ವೇಳೆ ಇದು ಅನುಕ್ರಮವಾಗಿ 7,63,575 ಹಾಗೂ 8,06,218ರಷ್ಟು ಹೆಚ್ಚಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2025ರಲ್ಲೂ ಸ್ತನ ಕ್ಯಾನ್ಸರ್ ಬಹು ಸಾಮಾನ್ಯ ಅರ್ಬುದ ರೋಗ ಎನಿಸಲಿದೆ. ಐದು ವರ್ಷಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ ರೋಗಿಗಳ ಸಂಖ್ಯೆ 2,38,908ಕ್ಕೇರಲಿದೆ. ನಂತರದ ಸ್ಥಾನಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ (1,11,328) ಹಾಗೂ ಬಾಯಿ ಕ್ಯಾನ್ಸರ್ (90,060) ಪ್ರಕರಣಗಳು ಇರುತ್ತವೆ ಎಂದು ಅಂದಾಜು ಮಾಡಲಾಗಿದೆ.

ಈ ವರ್ಷ ತಂಬಾಕು ಮತ್ತು ಅದರ ಉತ್ಪನ್ನಗಳ ಸೇವೆಯಿಂದ ಕಂಡುಬರುವ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 3.7 ಲಕ್ಷದಷ್ಟಿದೆ.

Facebook Comments

Sri Raghav

Admin