ಕೇನ್ಸ್ ಚಲನಚಿತ್ರೋತ್ಸವ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರಿಸ್ , ಮಾ. 20- ಕೊರೊನಾ ವೈರಸ್‍ನಿಂದ ಇಡೀ ವಿಶ್ವವೇ ತಲ್ಲಣಗೊಂಡಿರುವುದರಿಂದ ಹಲವು ಕ್ರೀಡಾ ಕೂಟಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲೇ ಈಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಮುಂದೂಡಲಾಗಿದೆ.  ವಿಶ್ವದಲ್ಲೇ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಕೇನ್ಸ್ ಚಲನಚಿತ್ರೋತ್ಸವಕ್ಕೂ ಕೊರೊನಾ ಕಾಟ ಶುರುವಾಗಿದ್ದು ಪ್ರಶಸ್ತಿ ದಿನಾಂಕವನ್ನು ಮುಂದೂಡಿದ್ದಾರೆ.

ಈ ಹಿಂದಿನ ಯೋಜನೆಯಂತೆ ಕೇನ್ಸ್ ಚಲನಚಿತ್ರೋತ್ಸವವು ಪ್ಯಾರಿಸ್‍ನಲ್ಲಿ ಮೇ 12 ರಿಂದ 23ರವರೆಗೂ ನಡೆಯಬೇಕಾಗಿತ್ತಾದರೂ ವಿಶ್ವದಾದ್ಯಂತ ಕೊರೊನಾ ಮಾರಿ ಕಾಟ ಹೆಚ್ಚಾಗಿರುವುದರಿಂದ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಕೇನ್ಸ್ ಚಲನಚಿತ್ರೋತ್ಸವ ಮಂಡಳಿ ಸದಸ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೊರೊನಾ ವೈರಸ್ ಭೀತಿ ಸಂಪೂರ್ಣವಾಗಿ ಕೊನೆ ಆದ ನಂತರವೇ ಕೇನ್ಸ್ ಚಲನಚಿತ್ರೋತ್ಸವ ಸಮಾರಂಭವನ್ನು ಆಯೋಜಿಸಲು ಚಿಂತಿಸಿದ್ದು, ಜುಲೈ ತಿಂಗಳಿನಲ್ಲಿ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಡಳಿಯವರು ತಿಳಿಸಿದ್ದಾರೆ.  ಕೊರೊನಾ ವೈರಸ್ ಕಾಟ ಕೇವಲ ಕೇನ್ಸ್ ಚಲನಚಿತ್ರೋತ್ಸವಕ್ಕೆ ಮಾತ್ರ ಸೀಮಿತವಾಗದೆ ಟ್ರೆಬೆಕಾ, ಎಡಿನ್ಬರ್ಗ್, ಎಸ್‍ಎಕ್ಸ್‍ಎಸ್‍ಡ್ಲ್ಯೂ ಚಲನಚಿತ್ರೋತ್ಸವಗಳನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Facebook Comments